ವಿಷ ಬೆರೆಸಿದ ಆಹಾರ ನೀಡಿ ನಮ್ಮ ಮನೆಯ ಸಾಕು ನಾಯಿ ಹಾಗೂ ಕೋಳಿಗಳನ್ನು ಕೊಲ್ಲಲಾಗಿದೆ ಎಂದು ಪೊಲೀಸ್ ದೂರು ನೀಡಿದ ಘಟನೆ ಸುಳ್ಯ ತಾಲೂಕಿನ ಪೇರಡ್ಕದಿಂದ ರಾತ್ರಿ ವರದಿಯಾಗಿದೆ.
ಪೇರಡ್ಕದ ವೀರಪ್ಪ ಎಂಬುವವರ ಮನೆಯಲ್ಲಿ ಮೇ. ೪ರಂದು ರಾತ್ರಿ ಕೋಳಿಗಳು ಹಾಗೂ ನಾಯಿ ಸತ್ತಿದ್ದು, ಯಾರೋ ಕಿಡಿಗೇಡಿಗಳು ವಿಷ ಬೆರೆಸಿದ ಆಹಾರ ಹಾಕಿರಬಹುದೆಂದು ಶಂಕಿಸಲಾಗಿದೆ.ಪೇರಡ್ಕದ ವೀರಪ್ಪ ಗೌಡರ ಮನೆಯಲ್ಲಿ
ರಾತ್ರಿ ಸುಮಾರು ೧೦.೩೦ ಕ್ಕೆ ಮನೆಯ ಅಂಗಳದಲ್ಲಿ ನಾಯಿ ಬೊಗಳುವ ಶಬ್ದಕೇಳಿ ಮಹಿಳೆ ಹೊರ ಬಂದು ನೋಡಿದಾಗ ಯಾರೋ ಅಲ್ಲಿಂದ ಓಡಿದ್ದಾರೆ ಎನ್ನಲಾಗಿದೆ.
ಮುಂಜಾನೆ ಎದ್ದು ನೋಡಿದಾಗ ಮನೆಯ ಅಂಗಳದಲ್ಲಿ ೩ ಕೋಳಿ ಹಾಗೂ ಮನೆಯ ಸಾಕು ನಾಯಿ ಸತ್ತುಬಿದ್ದಿದ್ದು ಕಂಡುಬಂದಿದೆ.
ಈ ಬಗ್ಗೆ ಮನೆಯವರು ಪೊಲೀಸ್ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.
ವಿಷ ಬೆರೆಸಿದ ಆಹಾರ ನೀಡಿ ಸಾಕು ನಾಯಿ ಕೋಳಿಗಳನ್ನು ಕೊಂದಿರುವ ಸಂಶಯ : ಪೊಲೀಸ್ ದೂರು





















































