ಚೆಂಬು : ಕಾಡಾನೆ ದಾಳಿಗೆ ರೈತ ಬಲಿ,ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ

ಮಡಿಕೇರಿ ತಾಲೂಕು ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಕಾಡಾನೆ  ದಾಳಿಗೆ ವ್ಯಕ್ತಿ ಯೊಬ್ಬರು ಬಲಿಯಾದ  ದಾರುಣ ಘಟನೆ ಬುಧವಾರವ ತಡ ರಾತ್ರಿ ನಡೆದಿದೆ. ದಬ್ಬಡ್ಕ ಕೊಪ್ಪದ ಶಿವಪ್ಪ (72) ಆನೆ ತುಳಿತಕೊಳಗಾಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ.ಅವರು ಅ.6ರ ರಾತ್ರಿ ಸುಮಾರು 10.30 ರ ಸಮ ಮನೆಯ ಹತ್ತಿರದ ತೋಟದಲ್ಲಿ ನಾಯಿ ಬೋಗಳುತ್ತಿರುವುದನ್ನು ನೋಡಲು ತೋಟದ ಕಡೆಗೆ  ತನ್ನ ಪತ್ನಿಯೊಂದಿಗೆ ತೆರಳಿದ ಸಂದರ್ಭ ದಲ್ಲಿ ಆನೆ ಅವರಿಗೆ  ತುಳಿದಿದೆ. ಪತ್ನಿ ಪ್ರಾಣಾಪಯದಿಂದ ಪರಾಗಿದ್ದಾರೆ. ಗಂಭೀರ ಗಾಯಗೊಂಡ ಶಿವಪ್ಪ ಅವರನ್ನು  ಮನೆಯವರು ತಕ್ಷಣವೇ ಸಂಪಾಜೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮದ್ಯೆ  ಪಟ್ಟದ್ದಾರೆನ್ನಲಾಗಿದೆ.ಮೃತ ದೇಹ ವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿ ಪೋಸ್ಟ್ ಮಾರ್ಟಂ ಮಾಡಿ ವಾರಿಸುದಾರರಿಗೆ ಹಸ್ತಾಂತರಿಸಲಾಯಿತು.
ಮೃತರು ಪತ್ನಿ, ಮಕ್ಕಳಾದ ವಿನಯ, ಚಿತ್ರಾ, ನಯನ, ಸುಮಾ, ಶೋಭ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಶಾಸಕ ಪೊನ್ನಣ್ಣ ಅವರು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ತೆರಳಿ  ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ  ಹೇಳಿದರು.ಅಲ್ಲದೆ ಸರಕಾರದಿಂದ ರೂ.5 ಲಕ್ಷ  ಪರಿಹಾರ  ನೀಡಿ ಮುಂದೆ 10 ಲಕ್ಷ ಪರಿಹಾರ   ಭರವಸೆ ನೀಡಿದರು.
ಶಾಸಕರ ಸೂಚನೆ ಮೇರೆಗೆ, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಶ್ರೀ ಸಂಕೇತ್ ಪೂವಯ್ಯ ಅವರು ಧಾವಿಸಿ, ಶವವನ್ನು ಇರಿಸಿದ ಸಂಪಾಜೆ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರ ಪಡೆದುಕೊಂಡರು.
  ಸ್ಥಳೀಯರೊಂದಿಗೆ ಮಾತನಾಡಿದ ಬಳಿಕ, ವಿಷಯವನ್ನು ಶಾಸಕರಿಗೆ ತಿಳಿಸಿ ಕೂಡಲೇ ಆ ಭಾಗದಲ್ಲಿ ಇರುವ ಒಂದು ಪುಂಡಾನೆಯನ್ನು ಸೆರೆ ಹಿಡಿಯಲು ಬೇಕಾದ ಎಲ್ಲಾ ಇಲಾಖೆ ಕಾನೂನುಗಳನ್ನು ಈಡೇರಿಸಿ, ಶೀಘ್ರದಲ್ಲಿ ಆನೆ ಹಿಡಿಯಲು ಅನುಮತಿ ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು ಹಾಗು ಈ ಕೂಡಲೇ ಆನೆ ಓಡಿಸುವ ಕಾರ್ಯಾಚರಣೆ ಮಾಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದರಲ್ಲದೆ, ಅರಣ್ಯ ಇಲಾಖೆಗೆ ಹೆಚ್ಚು ಸಿಬ್ಬಂದಿ ಒದಗಿಸುವ ಭರವಸೆಯನ್ನು ನೀಡಿದರು.
   ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯರಾದ ಆದಮ್ ಕುಂಹಿ, ಪದ್ಮನಾಭ ಮಂಗಳಪ್ಪಾರೆ, ರಘುನಾಥ್ ಬಾಲಂಬಿ, ವಿನಯ ಮಾಣಿಕಲ್ಲು, ಕೊಪ್ಪದ ಶಿವರಾಮ, ಕೊಪ್ಪದ ಭುವನೇಶ್ವರ, ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ವೈದ್ಯರು ಉಪಸ್ಥಿತರಿದ್ದರು.
*ನಿರಂತರ ಎರಡು ತಿಂಗಳಿಂದ ದಬ್ಬಡ್ಕ,ಕೊಪ್ಪ,ಚೆಂಬು,ಊರುಬೈಲು ತೋಟಗಳಿಗೆ ಕಾಡಾನೆಗಳ ದಾಳಿ*
ನಿರಂತರ ಎರಡು ತಿಂಗಳಿಂದ ದಬ್ಬಡ್ಕ,ಕೊಪ್ಪ,ಚೆಂಬು,ಊರುಬೈಲು ತೋಟಗಳಿಗೆ ಕಾಡಾನೆಗಳು  ದಾಳಿ ಮಾಡಿ ಅಪಾರ ಬೆಳೆಗಳನ್ನು ನಾಶ ಪಡಿಸಿವೆ.ಈ ಹಿನ್ನೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮತ್ತು ಸಂಸದರಿಗೆ ಕಾಡಾನೆಗಳ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದರು.ಚೆಂಬು ಗ್ರಾಮದಲ್ಲಿ ಕಾಡಾನೆಗಳ ಸಮಸ್ಯೆಯ ಬಗ್ಗೆ ಅರಣ್ಯ ಇಲಾಖೆಯ ಸಭೆ ಕರೆದು ಆನೆ ಕಂದಕ ಮತ್ತು‌ ತಡೆಗೋಡೆ ಮಾಡುವ ಬಗ್ಗೆ ನಿರ್ಣಯ ಮಾಡಿದ್ದರು.
ನಿರಂತರ ಆನೆ ದಾಳಿಯಿಂದ ಕಂಗಾಲಾಗಿದ್ದ ಕೃಷಿಕರಿಗೆ ರೈತನ ಸಾವಿಗೆ ಅರಣ್ಯ ಇಲಾಖೆಯ ವಿರುದ್ಧ ಭಾರೀ  ಆಕ್ರೋಶ ವ್ಯಕ್ತವಾಗಿದೆ.
ಆನೆ ದಾಳಿ ಮಾಡುತ್ತಿರುವ ಬಗ್ಗೆ ಹಾಗೂ ಆನೆ ಓಡಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆ ಭಾಗದ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯವರು ಆನೆ ಓಡಿಸುವ ಕೆಲಸ ಕೈಗೆತ್ತಿಕೊಂಡಿದ್ದು ಶುಕ್ರವಾರ ಪರಿಣತ ಎಲಿಪೆಂಟ್ ಟಾಸ್ಜ್ ಪೋರ್ಸ್ ನವರು ಬಂದು ಆನೆ ಓಡಿಸಲಿಸಲಿದ್ದಾರೆ ಎಂದು ತಿಳಿದು ಬಂದಿದೆ.



































































































Leave a Comment

Your email address will not be published. Required fields are marked *

error: Content is protected !!
Scroll to Top