ಬೆಳ್ಳಾರೆ : ಡಿ.ಜಿ ಪೇ ಉದ್ಘಾಟನೆ

ಸುಳ್ಯ ತಾಲೂಕಿನ ಬೆಳ್ಳಾರೆ CSC ಕೇಂದ್ರದಲ್ಲಿ Digi Pay ಕಾರ್ಯ ಕ್ರಮವನ್ನು ಡಾ. ಜೀವನ್ ಪ್ರಕಾಶ್ ಕೆ ಅವರು ಜು.2ರಂದು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು
ಇವರು ಡಿ ಜಿ ಪೇ ಸೇವೆಯು ನಮ್ಮ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ಉಪಯುಕ್ತವಾದ ಕಾರ್ಯಕ್ರಮವಾಗಿದೆ ,ಇದರಿಂದ ಬ್ಯಾಂಕಿಗೆ ಹೋಗುವ ಸಮಯ ಮತ್ತು ಬ್ಯಾಂಕ್ ನಲ್ಲಿ ಕಾಯುವ ವೇಳೆಯಲ್ಲಿ, ಅತೀ ಸುಲಭವಾಗಿ ಫಲಾನುಭವಿಯ ಖಾತೆಯಿಂದ ಹಣವನ್ನು ತೆಗೆಯಬಹುದು ಈ ಸೇವೆಯ ಉಪಯೋಗವನ್ನು ನಾವೆಲ್ಲರೂ ಪಡೆದುಕೊಳ್ಳಬೇಕು ಎಂಬ ಆಸೆಯ ನುಡಿಗಳನ್ನು ಆಡಿದರು. ಯೋಜನಾಧಿಕಾರಿಯವರು Digi Pay ಸೇವೆಯನ್ನು ವಾರದ ನಗದು ಸಂಗ್ರಹಣೆ ದಿನದಂದು ATM CARD/AEPS ಬಳಸಿ ಸದಸ್ಯರ ಬ್ಯಾಂಕ್ ಖಾತೆಯಿಂದ ಸುಲಭವಾಗಿ ಹಣ ಪಡೆಯುವ ವ್ಯವಸ್ಥೆ , ಇದನ್ನು ಒಕ್ಕೂಟ ಸಭೆಯಲ್ಲಿ ಜನರಿಗೆ ಮಾಹಿತಿ ನೀಡಬೇಕು ಇದು ಒಂದು ಯೋಜನೆಯ ನೂತನ ಕಾರ್ಯಕ್ರಮ ಇದನ್ನು ಎಲ್ಲರೂ ಉಪಯೋಗ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಶೃಂಗಾರ ಸ್ಟುಡಿಯೋ ಮಾಲೀಕರಾದ ಸುಧಾಕರ್ ರೈ, ವಲಯ ಮೇಲ್ವಿಚಾರಕರು, ತಾಲುಕು ನೋಡೆಲ್ ಅಧಿಕಾರಿ, ವಲಯದ ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.





















































































































Leave a Comment

Your email address will not be published. Required fields are marked *

error: Content is protected !!
Scroll to Top