ಸುಳ್ಯ : ತಾಲೂಕಿನ ಇತಿಹಾಸ ಪ್ರಸಿದ್ಧ ಹರ್ಝತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಅದ್ದೂರಿಯಾಗಿ ಸಮಾಪನಗೊಂಡಿತು. 7 ದಿನಗಳ ಕಾಲ ನಡೆದ ಉರೂಸ್‌ನ 7ನೇ ದಿನವಾದ ಜ.27 ರಂದು ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಅಸ್ಸಯ್ಯದ್ ಮೈನುಲ್ ಅಬಿದೀನ್ ತಂಜಳ್ ದುಗ್ಗಲಡ್ಕ ದುವಾ ನೆರವೇರಿಸಿದರು. ದಾರಿ ತಪ್ಪುತ್ತಿರುವ ಯುವ ಸಮೂಹ ಎಂಬ ವಿಷಯದಲ್ಲಿ ಆಶಿಕ್ ದಾರಿಮಿ ಆಲಪ್ಪುಝ ಧಾರ್ಮಿಕ ಉಪನ್ಯಾಸ
ನೀಡಿದರು. ಉರೂಸ್ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಅಧ್ಯಕ್ಷತೆ ವಹಿಸಿದ್ದರು. ಖತೀಬರಾದ ಹಸನ್ ಅರ್ಶದಿ ಸ್ವಾಗತಿಸಿದರು.ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ವಕ್ಸ್ ಅಧಿಕಾರಿ ಅಬೂಬಕ್ಕರ್. ಕೆ ಮಾತನಾಡಿದರು.
ಹಾಜಿ ಮಹಮ್ಮದ್ ಚೆರ್ಕಳ, ಫಕೀರಬ್ಬ ಮಾಸ್ಟರ್, ಶಾಫಿ ಕುತ್ತಮೊಟ್ಟೆ, ಆಸಿಫ್ ಅಬ್ದುಲ್ಲಾ ಉಳ್ಳಾಲ, ಮೂಸ ಹಾಜಿ ಸುಂಕದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯು. ಹೆಚ್ ಅಬೂಬಕ್ಕರ್ ಹಾಜಿ ಮಂಗಳ, ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಲ್ಲಪಣೆ, ಕೋಶಾಧಿಕಾರಿ ನಾಶೀರ್ ಯು.ಪಿ ಬಿಝ್, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯು.ಪಿ. ಬಶೀರ್ ಬೆಳ್ಳಾರೆ, ಉರೂಸ್ ಸಮಿತಿ ಕೋಶಾಧಿಕಾರಿ ಝಕರಿಯಾ
ನಿಡ್ಯಾರ್, ಉರೂಸ್ ಸಮಿತಿ ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್, ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ನಿರ್ದೇಶಕರಾದ ಬಶೀರ್. ಕೆ.ಎ, ಇಸ್ಮಾಯಿಲ್ ಬಿ, ಹಸೈನಾರ್. ಬಿ, ಹನೀಫ್ ನೆಟ್ಟಾರು, ಹಮೀದ್ ಹೆಚ್ ಎಂ, ಹಮೀದ್ ಅಲ್ವಾ, ಉಸ್ಮಾನ್ ಹಾಜಿ, ಅಜರುದ್ದೀನ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.
ಉರೂಸ್ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದರು.
ಇತಿಹಾಸ ಪ್ರಸಿದ್ದ ಬೆಳ್ಳಾರೆ ಉರೂಸ್ ಸಮರೋಪ





















































