ಕ್ಯಾಪ್ಟನ್ ವಸಂತ ಪೇರಡ್ಕರವರು ಭಾರತೀಯ ಸೇನೆಯಲ್ಲಿ ಸುದೀರ್ಘ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಡಿ.31 ಸೇವೆಯಿಂದ ನಿವೃತ್ತಿಯಾದರು.
1996 ಏಪ್ರಿಲ್ 25 ರಂದು ಸೇನೆಗೆ ಸೇರ್ಪಡೆಗೊಂಡ ಇವರು ರಾಜಸ್ತಾನ, ಅಸ್ಸಾಂ, ಜಮ್ಮು ಕಾಶ್ಮೀರ, ಲಡಾಕ್, ಅರುಣಾಚಲ ಪ್ರದೇಶ, ಕೊಯಮತ್ತೂರು, ಆಂಧ್ರ ಪ್ರದೇಶ ದಲ್ಲಿ ಸೇವೆ ಸಲ್ಲಿಸಿದ್ದರು.
ಇವರು ಪೇರಡ್ಕದ ಮಡಪ್ಪಾಡಿ ರಾಮಚಂದ್ರ ಮತ್ತು ದೇವಕಿ ದಂಪತಿಯ ಪುತ್ರ. ವಸಂತ ರವರ ಪತ್ನಿ ಮಮತಾ, ಪುತ್ರಿಯರಾದ ತ್ರಿಶಾ ಪಿ.ವಿ., ದಿಶಾ ಪಿ.ವಿ. ರೊಂದಿಗೆ ನೆಲೆಸಿದ್ದಾರೆ.
ಭಾರತೀಯ ಯೋಧ ಕ್ಯಾಪ್ಟನ್ ವಸಂತ ಪೇರಡ್ಕ ಸೇವೆಯಿಂದ ನಿವೃತ್ತಿ





















































