ಹೆಚ್.ಟಿ ಲೈನ್ ತಾಗಿ ಮರದಿಂದ ಬಿದ್ದು ವ್ಯಕ್ತಿ ಸಾವು

ಮರದ ಕೊಂಬೆ ಕಡಿಯುವಾಗ ಹೆಚ್.ಟಿ ಲೈನ್ ತಾಗಿ, ಮರದಿಂದ ಕೆಳಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಪುಂಡಿಕ್ಕು ಎಂಬಲ್ಲಿ ಗುರುವಾರ ನಡೆದಿದೆ.
ಚನನ ಗೌಡ (69) ಮೃತ ವ್ಯಕ್ತಿ,
ಚನನ ಗೌಡ ಅವರು ಮೆಸ್ಕಾಂ ಇಲಾಖೆಯ ಅನುಮತಿ ಪಡೆಯದೇ, ಖಾಸಗಿ ಜಮೀನಿನಲ್ಲಿ ಇರುವ ಮರದ ಗೆಲ್ಲು ಕಡಿಯುವಾಗ, ಗೆಲ್ಲು ಆಕಸ್ಮಿಕವಾಗಿ, ಅಲ್ಲಿಯೇ ರಸ್ತೆಯಲ್ಲಿ ಹಾದು ಹೋಗಿರುವ 11ಕೆವಿ ಕುವೆಟ್ಟು ಫೀಡರ್ ನ HT line ಗೆ ಬಿದ್ದು, ವಿದ್ಯುತ್ ಶಾಕ್ ಗೆ ಒಳಗಾಗಿ ಮರದಿಂದ ಕೆಳಗೆ ಬಿದ್ದಿದ್ದಾರೆ.
ಕೂಡಲೇ ಅವರನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯ ವೈದ್ಯರು ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದು ಕೊಂಡು ಹೋಗಲು ತಿಳಿಸಿದ್ದು, ಮಾರ್ಗ ಮಧ್ಯೆ ಚನನ ಗೌಡ ಅವರು ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ



































































































Leave a Comment

Your email address will not be published. Required fields are marked *

error: Content is protected !!
Scroll to Top