ಆಗಸ್ಟ್ 7; ಕೆ.ವಿ.ಜಿ ಮೆಡಿಕಲ್ ಕಾಲೇಜು ವತಿಯಿಂದ ಆರೋಗ್ಯ ಪಾದಕ್ಕಾಗಿ ಕಾಲು ನಡಿಗೆ” ವಿಶೇಷ ಜಾಥಾ

ಕೆವಿಜಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ತನ್ನ ಬೆಳ್ಳಿಹಬ್ಬವನ್ನ ಆಚರಿಸುತ್ತಿರುವಂಥ ಶುಭ ಸಂದರ್ಭದಲ್ಲಿ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ “ಆರೋಗ್ಯ ಪಾದಕ್ಕಾಗಿ ಕಾಲು ನಡಿಗೆ” ಎನ್ನುವ ವಿಶೇಷ ಜಾಥಾ ಕಾರ್ಯಕ್ರಮವನ್ನು ಆಗಸ್ಟ್ ತಿಂಗಳ ಏಳನೇ ತಾರೀಖಿನಂದು ಬೆಳಗ್ಗೆ ಎಂಟುಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷ ಡಾ.ಚಿದಾನಂದ ಹಾಗೂ
ಮೆಡಿಕಲ್ ಕಾಲೇಜಿನ‌ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಗೋಪಿನಾಥ್ ಅವರು ತಿಳಿಸಿದ್ದಾರೆ.
ಅವರು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಡಿಗೆಯ ಜಾಥಾವು ಕಾಲೇಜಿನಿಂದ ಹೊರಟು ಸುಳ್ಯ ನಗರದಲ್ಲಿ ನಡೆಯಲಿದೆ. ಕರ್ನಾಟಕದ ಶಸ್ತ್ರಚಿಕಿತ್ಸಕರ ಒಕ್ಕೂಟವಾದ ಎ.ಎಸ್.ಐ, ಹಾಗೂ ಇಂಡಿಯನ್ ಪೋಡಿಯಾಟ್ರಿ ಎಸೋಸಿಯೇಷನ್ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾಲು ನಡಿಗೆ ಜಾಥಾ ಮುಗಿದ ಬಳಿಕ ಸಮಯ10:00 ಗಂಟೆಯ ನಂತರ ನಡೆಸಲಾಗುವ ‘ಡಯಾಬಿಟಿಕ್ ಫುಟ್ ಕ್ಯಾಂಪ್ ನಲ್ಲಿ ಡಯಾಬಿಟಿಸ್‌ ಇರುವವರ ಪಾದದಲ್ಲಿ ಹೆಚ್ಚಿನ ತೊಂದರೆಗಳು ಕಾಣಿಸುವುದರಿಂದ, ಕಾಲಿನ ಮತ್ತು ಪಾದದ ವಿಶೇಷ ತಪಾಸಣೆಯನ್ನು ನಡೆಸಲಾಗುತ್ತದೆ
ಈ ಸಂದರ್ಭದಲ್ಲಿ, ಕಾಲು ಮತ್ತು ಪಾದದ ಶಸ್ತ್ರ ಚಿಕಿತ್ಸಾ ತಜ್ಞರಾದ ಬೆಂಗಳೂರಿನ ಡಾ. ಪ್ರದೀಪ್ ಮತ್ತು ಅವರ ತಂಡ ದಿಂದ ಮಧುಮೇಹದಿಂದ ಬಳಲುತ್ತಿರುವವರ ಪಾದಗಳ ತಪಾಸಣೆಯನ್ನು ನಡೆಸಲಾಗುವುದು
೧) ಪಾದದ ನೀಲಿ ನಕ್ಷೆಯನ್ನು ತೆಗೆದು, ಒತ್ತಡದ ಬಿಂದುಗಳನ್ನು ಗುರುತಿಸುವ ವಿಶೇಷ ಪರೀಕ್ಷೆಯನ್ನು ನಡೆಸಲಾಗುವುದು
೨)ಪಾದದಲ್ಲಿ ರಕ್ತಸಂಚಾರದವನ್ನು ಡಾಪ್ಟರ್ ಮೂಲಕ ತಪಾಸಣೆ ಮಾಡುವುದು,
೩)ಪಾದದ ಸ್ಪರ್ಶ ಜ್ಞಾನವನ್ನು ಪರೀಕ್ಷಿಸುವುದು
೪) ಪಾದದ ಮತ್ತು ಕಾಲು ಬೆರಳುಗಳ ರಕ್ಷಣೆಗಾಗಿ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಮಧುಮೇಹಕ್ಕೆ ಸಂಬಂಧಿಸಿದ ರಕ್ತ ಪರೀಕ್ಷೆಗಳನ್ನು ಉಚಿತವಾಗಿ ನಡೆಸಿಕೊಡಲಾಗುತ್ತದೆ.
ಮಧುಮೇಹಕ್ಕೆ ಸಂಬಂಧಿಸಿದ ರಕ್ತ ಪರೀಕ್ಷೆಗಳನ್ನು ಉಚಿತವಾಗಿ ನಡೆಸಿಕೊಡಲಾಗುತ್ತದೆ.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಅಧ್ಯಕ್ಷರು ಹಾಗೂ ಕೆವಿಜಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕರಾದ ಡಾ. ಕೆ.ವಿ ಚಿದಾನಂದ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ.ನೀಲಾಂಬಿಕೆ ನಟರಾಜನ್, ಕಾಲೇಜಿನ ಆಡಳಿತ ಅಧಿಕಾರಿಯಾಗಿರುವ ಡಾ.ಸಿ.ಆರ್. ಭಟ್, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಗೋಪಿನಾಥ್, ಡಾ. ರಂಜಿತ್, ಡಾ. ಸಾಯಿ ಗೀತಾ ಹಾಗೂ ಡಾ. ಗೀತಾ ದೊಪ್ಪ ಇವರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಸ್ತ್ರ ಚಿಕಿತ್ಸಾ ವಿಭಾಗದ ವೈದ್ಯ ವಿದ್ಯಾರ್ಥಿಗಳು ಕೆವಿಜಿ ಕಾಲೇಜಿನ ವಿದ್ಯಾರ್ಥಿಗಳು, ನರ್ಸಿಂಗ್ ಕಾಲೇಜಿನ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕೆವಿಜಿ ಕಾಲೇಜ್ ಆಫ್ ಫಿಜಿಯೋಥೆರಪಿ, ಸುಳ್ಯದ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ನ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಗಸ್ಟ್ 8 ಮತ್ತು 9ರಂದು ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ, ಕರ್ನಾಟಕ ಶಸ್ತ್ರ ಚಿಕಿತ್ಸಾ ತಜ್ಞರ ಸಂಘದ Mid CON ೨೦೨೬ ರಾಜ್ಯಮಟ್ಟದ ಕಾನ್ಸರೆನ್ಸ್ ನಡೆಯಲಿದೆ. ಇದರಲ್ಲಿ ರಾಜ್ಯದ ಎಲ್ಲೆಡೆಯಿಂದ ಶಸ್ತ್ರ ಚಿಕಿತ್ಸಾ ತಜ್ಞರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಆಸ್ಪತ್ರೆಯ ಡೀನ್ ಡಾ.ನೀಲಾಂಬಿಕೆ ನಟರಾಜನ್,ಡಾ.ಸಾಯಿ ಗೀತಾ,ಡಾ.ಗೀತಾ ದೊಪ್ಪ ಇತರರು ಉಪಸ್ಥಿತರಿದ್ದರು.



































































































































Leave a Comment

Your email address will not be published. Required fields are marked *

error: Content is protected !!
Scroll to Top