ಜೀವನದಲ್ಲಿ ಗುರು ಮತ್ತು ಗುರಿ ಮುಖ್ಯ : ಸ್ವಾಮಿ ಯೋಗೇಶ್ವರಾನಂದ ಸರಸ್ವತಿ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಜು.29ರಂದು ಗುರುಪೂರ್ಣಿಮೆ ಅಂಗವಾಗಿ ಗುರುಪೂಜೆ,ಭಜನಾ ಸತ್ಸಂಗ,ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯರು ವ್ಯಾಸ ಜಯಂತಿಯನ್ನು ಗುರುಪೂರ್ಣಿಮೆಯಾಗಿ ಎಲ್ಲೆಡೆ ಆಚರಿಸಲಾಗುತ್ತಿದೆ.ಜೀವನದಲ್ಲಿ ಪ್ರತಿಯೊಬ್ಬರಿಗೆ ಗುರುವಿರಬೇಕು ಮುಂದೆ ಗುರಿ ಇರಬೇಕು.ಆಗ ಜೀವನದಲ್ಲಿ ಯಶಸ್ಸು ಕಾಣಲು‌ ಸಾಧ್ಯ ಎಂದು ಹೇಳಿದರು.
ಅಜ್ಜಾವರ ಕರ್ಲಪ್ಪಾಡಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಜಂಯ ಅಡ್ಪಂಗಾಯರು ಸ್ವಾಮಿಜಿಯವರ 238ನೇ ಕ್ರತಿ ಮಾಲೆ “ಮಾನವ ಜನ್ಮ ದೊಡ್ಡದು” ಬಿಡುಗಡೆಗೊಳಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗುರು ಹಿರಿಯರಿಗೆ ಗೌರವ ಕೊಡುವುದು ನಮ್ಮ ಹಿಂದು ಧರ್ಮದ ಸಂಪ್ರದಾಯವಾಗಿದೆ.ಮಾತೃ ಋಣ,ಪಿತೃ ಋಣ,ಗುರುಋಣ ನಮ್ಮ ಮೇಲಿದ್ದು ಇವುಗಳು ನಮ್ಮ ನೆನಪಿನಲ್ಲಿರಬೇಕು.ಈ ಋಣಗಳನ್ನು ತೀರಿಸುವ ಪ್ರಯತ್ನ ನಾವು ಮಾಡಬೇಕು.ಇದರಿಂದ ನಮ್ಮ ಜೀವನ ಪಾವನ ಆಗಲು ಸಾಧ್ಯ ಎಂದು ಹೇಳಿದರು.
ಕೆ.ವಿ.ಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರೊ.ಡಾ.ಹರ್ಷವರ್ಧನ,ಮುರಳಿಧರ ರೈ ಪೇರಾಲು ಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು‌.
ಅಡೂರು ವೇಣುಗೋಪಲ,ಉದಯ,ಮುರಳಿಧರ ರೈ ತಂಡದವರು ಭಜನಾ ಸತ್ಸಂಗ ನಡೆಸಿಕೊಟ್ಟರು.ಆಶ್ರಮದ ಟ್ರಸ್ಟಿ ಪ್ರಣವಿ ಗುರುಪೂಜೆ ಮಾಡಿದರು.
ಶಿಕ್ಷಕಿ ಸುನಂದ ಸ್ವಾಗತಿಸಿದರು.ಪ್ರೊ.ಅನಿಲ್ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.ಸುಮಂಗಲ ಕೋಡಿಹಾಳ ವಂದಿಸಿದರು.



































































































































Leave a Comment

Your email address will not be published. Required fields are marked *

error: Content is protected !!
Scroll to Top