ಜೇಸಿಐ ಸುಳ್ಯ ಪಯಸ್ವಿನಿ ಘಟಕ ವತಿಯಿಂದ ವಿಶ್ವ ಕಾರ್ಮಿಕ ದಿನ ಆಚರಣೆ 

ಜೇಸಿಐ ಸುಳ್ಯ ಪಯಸ್ವಿನಿ
ವತಿಯಿಂದ  ವಿಶ್ವ ಕಾರ್ಮಿಕ ದಿನಾಚರಣೆ    ಕಾರ್ಯಕ್ರಮವನ್ನು  ಮೇ 2ರಂದು   ಸಂಚಯ ನಿವಾಸ ಚೂಂತಾರು ಇಲ್ಲಿ ಆಚರಿಸಲಾಯಿತು.































































































ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಜೇಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ  ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಕಾರ್ಮಿಕ ದಿನದ ಪ್ರಯುಕ್ತ ಶ್ರಮಿಕ ವರ್ಗದ ಜನರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಎಲೇಕ್ಟ್ರಿಷನ್ ಆಗಿ ಗುರುತಿಸಿ ಕೊಂಡಿರುವ ಶ್ರೀ. ಹರಿಶ್ಚಂದ್ರ ತಂಟೆಪ್ಪಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ. ವಸಂತ ಶೆಟ್ಟಿ ಬೆಳ್ಳಾರೆ, ಅಧ್ಯಕ್ಷರು ದೆಹಲಿ ತುಳು ಸಿರಿ, ನಿನಾದ ತಂಟೆಪ್ಪಾಡಿ ಇವರು ಅಭಿನಂದನಾ ಮಾತುಗಳನ್ನಾಡಿದರು.

ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಜೇಸಿ ಹೆಚ್.ಜಿ.ಎಫ್ ಪಿ‌. ಎಸ್. ಗಂಗಾಧರ ಸನ್ಮಾನಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಅಮರಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ. ಪ್ರೇಮ ಕೂಸಪ್ಪ ಗೌಡ ಚೂಂತಾರು, ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷರಾದ ಜೇಸಿ. ದೇವಿಪ್ರಸಾದ್ ಚಿಕ್ಮುಳಿ, ಜೇಸಿಐ ಸುಳ್ಯ ಸಿಟಿ ಅಧ್ಯಕ್ಷರಾದ ಜೇಸಿ. ನಾಗವೇಣಿ ದಾಮೋದರ ಕೋರಡ್ಕ, ಜೇಸಿಐ ಬೆಳ್ಳಾರೆ ಅಧ್ಯಕ್ಷರಾದ ಜೇಸಿ. ಪೂರ್ಣಿಮಾ ಪೆರ್ಲಂಪ್ಪಾಡಿ ಭಾಗವಹಿಸಿ ಮಾತನ್ನಾಡಿದರು. ಜೇಸಿಐ ಬೆಳ್ಳಾರೆಯ ಪೂರ್ವಾಧ್ಯಕ್ಷರಾದ ಲೋಕೇಶ್ ತಂಟೆಪ್ಪಾಡಿ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು.

ಪಿಪಿಪಿ ಅಶೋಕ್ ಚೂಂತಾರು   ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯಕ್ರಮ ಸಂಯೋಜಕಿ ಜೇಸಿ ಶೋಭಾ ಅಶೋಕ್ ಚೂಂತಾರು ಜೇಸಿವಾಣಿ ವಾಚಿಸಿದರು. ಜೇಸಿ. ವಿನೋದ್ ಮೂಡಗದ್ದೆ ಸನ್ಮಾನ  ಪತ್ರವನ್ನು ವಾಚಿಸಿ,     ಕಾರ್ಯದರ್ಶಿ
ಜೇಸಿ ತಾರಾ ಮಾದವ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top