ಹಲಸು ಮಾವು ಮೇಳದಿಂದ ನವಪೀಳಿಗೆಗೆ ಹಲಸು ಮಾವಿನ ಮಹತ್ವ ಅರಿವಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಟೀಮ್ ಉಬಾರ್, ಸುಳ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಕೃಷಿ ಅರಿವು ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಆಡಳಿತ,ತಾಲೂಕು ಪಂಚಾಯತ್, ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳು ಹಾಗೂ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದ ವಠಾರದಲ್ಲಿ ಏರ್ಪಡಿಸಲಾದ 3 ದಿನಗಳ ಹಲಸು ಮತ್ತು ಮಾವು ಮೇಳದ ಸಮರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಲಸು ಮಾವು ಮೇಳ ಯಶಸ್ವಿ ಕಾರ್ಯಕ್ರವಾಗಿದೆ.
ಹಲಸು ಮಾವು ತಿಂದು ಬದುಕಿದ ಹಿರಿಯರು ಇಂದಿಗೂ ಆರೋಗ್ಯವಂತರಾಗಿದ್ದಾರೆ.ಉಪಯುಕ್ತ ಮಾಹಿತಿ ಮತ್ತು ಉಪಯೋಗದ ಅರಿವು ಮೇಳದಿಂದ ಕೃಷಿಕರಿಗೆ ಲಭಿಸಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ರಾಜ್ಯ ರೈತ ಪ್ರಶಸ್ತಿ ಪುರಸ್ಕೃತರಾದ ಅಶೋಕ್ ಕುಮಾರ್ ಕೆ.ಎಸ್ ರವರು ಮಾತನಾಡಿ ” ಬಾಡಿಗೆ ಜಾಗದಲ್ಲಿ ಕೃಷಿ ಆರಂಭಿಸಿದವನು ಇಂದು ಸ್ವಂತ ಜಾಗದಲ್ಲಿ ನೂರಾರು ಎಕರೆಯಲ್ಲಿ ಬೇರೆ ಬೇರೆ ತಳಿಯ ಹಲಸು ಬೆಳೆದು ಯಶಸ್ಸು ಪಡೆದಿದ್ದೇನೆ. ದ್ರಾಕ್ಷಿ ಕೃಷಿ ಮಾಡಿ ಯಶಸ್ಸು ಕಂಡಿದ್ದೇನೆ.
ತಾಲೂಕು ಪಂಚಾಯತ್ ಇ.ಒ ರಾಜಣ್ಣ ಮಾತನಾಡಿ ” ಹಲಸು ಮಾವು ಮೇಳ ಜಾತ್ರೆಯ ಮೆರುಗು ಕಂಡಿದೆ.
ಲಕ್ಷಾಂತರ ರೂಪಾಯಿ ವ್ಯವಹಾರ ಮೇಳದಲ್ಲಿ ನಡೆದಿದೆ ಎಂದು ಹೇಳಿದರು.
ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ ಮಾತನಾಡಿ ” ಮೇಳದಿಂದ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಹಲಸು ಮೌಲ್ಯವರ್ಧಿತವಾಗಲಿದೆ ಎಂದು ಹೇಳಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಹಲಸು ಮಾವಿನ ಮೌಲ್ಯವರ್ಧನೆ ಮೇಳದಿಂದ ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಜಿ. ಆರ್.ಪ್ರಸಾದ್ ರವರು ಮಾತನಾಡಿ ಮೇಳದಲ್ಲಿ ರೈತಯರಿಗೆ ವ್ಯಾಪಾರಿಗಳಿಗೆ ಹೆಚ್ಚು ತಮ್ಮ ವಸ್ತುಗಳು ಹೆಚ್ಚು ವ್ಯಾಪಾರ ಆಗಿರುವುದು ಮೇಳದ ಯಶಸ್ಸು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಳದ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ರವರು “ಬಿದ್ದು ಹಾಳಾಗಿ ಹೋಗುತ್ತಿರುವ ಹಣ್ಣು ಗಳಿಂದ ಆದಾಯ ಹೇಗೆ ಗಳಿಸಬಹುದು. ರೈತರಿಗೆ ವಿಚಾರ ವಿನಿಮಯ ಕುರಿತು ಗೋಷ್ಠಿ ನಡೆದಿದೆ. ಹಲಸು ಮಾವು ಇದರ ಮೌಲ್ಯದ ಕುರಿತು ದಾರಿ ತೋರಿಸುವ ಕೆಲಸ ಮೇಳದಿಂದಾಗಿದೆ ಎಂಬ ಧನ್ಯತೆ ನಮಗಾಗಿದೆ. ಮೇಳದಲ್ಲಿ 10 ಸಾವಿರಕ್ಕಿಂತ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಮೇಳವು ಹಬ್ಬವಾಗಿ ಪರಿವರ್ತನೆಗೊಂಡು ಯಶಸ್ಸು ಕಂಡಿದೆ. ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೃಷಿ ಸಾಧಕರಾದ ಸುಬ್ರಾಯ ಭಟ್ ಮಾಪಲತೋಟ, ಕುಮುದಾ ಲಕ್ಷ್ಮೀಶ ಗಬ್ಬಲಡ್ಕ, ಗೋವಿಂದ ಭಟ್ ಉಬರಡ್ಕ ಮಿತ್ತೂರು, ಸುಜಾತ ಭಾಸ್ಕರ ರಾವ್ ಕಂಬಳಿಮೂಲೆ ಹಾಗೂ ನಮಾಮಿ ಬಳಗದ ಜಗದೀಶ್ ಕೆ.ಪಿ, ಶ್ರೀಸ ಕುಮಾರ್ ಮಾಲ್ಪಡ್ಕ, ಜಯರಾಮ ಮುಂಡೋಳಿಮೂಲೆ, ಶ್ಯಾಮ್ ಭಟ್ ಗೊರ್ಗೋಡಿ, ಜಗದೀಶ್ ಪರಮಲೆ ಯವರನ್ನು ಸನ್ಮಾನಿಸಲಾಯಿತು.
ಹಾಗೂ ಮೇಳದಲ್ಲಿ ಸುಮಾರು 1000 ಕ್ಕಿಂತ ಹೆಚ್ಚು ರೈತರಿಗೆ ಹಲಸು ಗಿಡಗಳಿಗೆ ಕಸಿ ಕಟ್ಟಿಕೊಟ್ಟ ಜಾಕ್ ಅನಿಲ್ ರವರನ್ನು ಸನ್ಮಾನಿಸಲಾಯಿತು.
ರಾಜ್ಯ ರೈತ ರತ್ನ ಪ್ರಶಸ್ತಿ ಪುರಸ್ಕೃತ ಉದ್ಯಮಿಗಳಾದ ಅಶೋಕ್
ಕುಮಾರ್ ಕೆ.ಎಸ್ ರವರನ್ನು ಸನ್ಮಾನಿಸಲಾಯಿತು.
ಉಪಸಮಿತಿಯ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು.
ಪ್ರಚಾರ ಸಮಿತಿ ಸಂಚಾಲಕರು, ಸುದ್ದಿ ಸಂಪಾದಕರಾದ ಹರೀಶ್ ಬಂಟ್ವಾಳ್ ರವರು ಸಾಧಕ ಕೃಷಿಕರ ಪರಿಚಯ ಮಾಡಿದರು. ಆಹಾರ ಸಮಿತಿ ಸಂಚಾಲಕರಾದ ಶ್ರೀಸ ಕುಮಾರ್ ಸನ್ಮಾನಿತರ ಪರಿಚಯ ಮಾಡಿದರು. ರಂಜಿತ್ ಅಡ್ತಲೆ ವಂದಿಸಿದರು.
ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.



























































