ಸುಳ್ಯ : ಸಂಪಾಜೆ ಸಮೀಪದ ದೇವರಕೊಲ್ಲಿಯಲ್ಲಿ ಜೂ.17ರಂದು ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿ ಗಾಯಗೊಂಡ ಸಂಪಾಜೆ ಹೊರ’ಠಾಣೆಯ ಪೋಲಿಸ್ ಸಿಬ್ಬಂದಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಪೋಲಿಸ್ ಸಿಬ್ಬಂದಿಯನ್ನು ವಿಖ್ಯಾತ್ ಎಂದು ಗುರುತಿಸಲಾಗಿದೆ.ಮಡಿಕೇರಿಯಿಂದ ಕಲ್ಲುಗುಂಡಿ ಕಡೆ ಹೋಮ್ ಗಾರ್ಡ್ ಗಿರೀಧರ ಅವರೊಂದಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿ ವಿಖ್ಯಾತರ ಕೈಗೆ ಗಂಭೀರ ಗಾಯವಾಗಿತ್ತು.
ಹೋಮ್ ಗಾರ್ಡ್ ಗಿರೀಧರ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ.
ದೇವರಕೊಲ್ಲಿ : ಅಪಘಾತದಲ್ಲಿ ಗಾಯಗೊಂಡ ಪೋಲಿಸ್ ಸಿಬ್ಬಂದಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು





























































