ಮಂಡೆಕೋಲು ಗ್ರಾಮದ ಬಾಯ್ಕೋಡಿ-ಚೇರ್ದಮೂಲೆ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಯು 10ಲಕ್ಷ ವೆಚ್ಚ ಮತ್ತು ಮಂಡೆಕೋಲು ಬೆಂಗತ್ತಮಲೆ ಪರಿಶಿಷ್ಟ ಪಂಗಡ ಕಾಲೋನಿಯರಸ್ತೆಗೆ 5.5ಅನುದಾನದಡಿಯಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಗಳನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ವಿನುತಪಾತಿಕಲ್ಲು,ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಮಮತ ಬೊಳುಗಲ್ಲು,ಮಾಜಿ ಸದಸ್ಯ ಅನಿಲ್ ತೊಟಪ್ಪಾಡಿ,ಭಾಜಪ ಮಂಡಲ ಪ್ರಮುಖರಾದ ಶುಬೋದ್ ಶೆಟ್ಟಿ ಮೆನಾಲ,ಜಯರಾಜ್ ಕುಕ್ಕೆಟ್ಟಿ,ಸುರೇಶ ಕಣೆಮರಡ್ಕ,ಶಿವಪ್ರಸಾದ್ ಉಗ್ರಾಣಿಮನೆ,ಉದಯ ಆಚಾರ್, ಸಹಿತ ಪ್ರಮುಖ ಕಾರ್ಯಕರ್ತರು, ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.
ಮಂಡೆಕೋಲು : ಕಾಂಕ್ರೀಟ್ ರಸ್ತೆ ಶಾಸಕರಿಂದ ಉದ್ಘಾಟನೆ






























































