ಸುಳ್ಯ ಮೊಸರು ಕುಡಿಕೆ ಉತ್ಸವದ ಪೂರ್ವಭಾವಿ ಸಭೆ-ನೂತನಪದಾಧಿಕಾರಿಗಳ ಆಯ್ಕೆ

ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನಾಚರಣೆಯ ಅಂಗವಾಗಿ ವರ್ಷಂಪ್ರತಿ ಸುಳ್ಯದಲ್ಲಿ ‌ಆಯೋಜಿಸಲ್ಪಡುವ ಸುಳ್ಯ ಮೊಸರು ಕುಡಿಕೆ ಉತ್ಸವದ ಪೂರ್ವ ಭಾವಿ ಸಭೆಯು ಜು.8 ರಂದು ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಿತು.
ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷ ರಾದ ಶ್ರೀಕಾಂತ್ ಗೋಳ್ವಾಲ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಮರ್ಕಂಜದ ರಾಜೇಶನಾಥ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಯಿತು.ಗೌರವ ಸಲಹೆಗಾರರಾಗಿ ತೀರ್ಥಕುಮಾರ್ ಕುಂಚಡ್ಕ, ಅಧ್ಯಕ್ಷರಾಗಿ ಸತೀಶ್ ಕೆ.ಜಿ, ಪ್ರಧಾನ ಕಾರ್ಯದರ್ಶಿ ವರ್ಷಿತ್ ಚೊಕ್ಕಾಡಿ, ಕೋಶಾಧಿಕಾರಿ ನವೀನ್ ಎಲಿಮಲೆ, ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ ಕಾಯರ್ತೋಡಿ, ವ್ಯವಸ್ಥಾ ಪ್ರಮುಖ್ ರಾಜೇಶ್ ಕಲ್ಲುಮುಟ್ಲು, ಪ್ರಭೋದ್ ಮೇನಾಲ, ಉದಯ ಚಳ್ಳ ರವರನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಯೋಜಕ್ ಹರಿಪ್ರಸಾದ್ ಎಲಿಮಲೆ, ದೇವಿಪ್ರಸಾದ್ ಅತ್ಯಾಡಿ, ಮನೋಜ್ ಪೆರಾಜೆ, ಭಾನುಪ್ರಕಾಶ್ ಪೆರುಮುಂಡ, ಭಾನು ಪ್ರಕಾಶ್ ಪೆಲ್ತಡ್ಕ, ಪ್ರಬಂದ್ ರೈ, ಅವಿನಾಶ್ ಕುರುಂಜಿ, ಶ್ರವಣ್ ರೈ, ಕೌಶಲ್, ಜಯರಾಮ ಪಿ.ಜಿ, ರಾಘವ ಕಂಜಿಪಿಲಿ, ಉಪೇಂದ್ರ ನಾಯಕ್, ಪ್ರಕಾಶ್ ಯಾದವ್ ಮೇನಾಲ, ನಿರ್ದೇಶ್ , ಕಿರಣ್, ಅಮೃತ್, ಚಿದಾನಂದ ದೊಡ್ಡೇರಿ, ಅರುಣ್ ಕೇರ್ಪಳ, ಸೀತಾರಾಮ ಕರ್ಲಪ್ಪಾಡಿ, ವಿನಯ್ ಪಾಡಾಜೆ, ಭರತ್ ಅಡೂರು ಮತ್ತಿತರರು ಉಪಸ್ಥಿತರಿದ್ದರು.



























































































































Leave a Comment

Your email address will not be published. Required fields are marked *

error: Content is protected !!
Scroll to Top