ಕರ್ನಾಟಕ ಘನ ಸರಕಾರದಿಂದ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಈಗಾಗಲೇ ನೋಂದಣಿಗೊಳಿಸಿರುವ ಗೃಹ ಬಳಕೆ ವಿದ್ಯುತ್ ಸ್ಥಾವರಗಳ ಮಾಹಿತಿಯನ್ನು ಪರಿಶೀಲನೆ ಮಾಡಲು ಮೆಸ್ಕಾಂ ಇಲಾಖಾ ವತಿಯಿಂದ ಮಾಪಕ ಓದುಗರು ಹಾಗೂ ಪವರ್ ಮ್ಯಾನ್ ಸಿಬ್ಬಂದಿಗಳು ಪ್ರತಿ ಮನೆ ಮನೆ ಭೇಟಿ ನೀಡಲಿದ್ದು ಸದ್ರಿ ಭೇಟಿಯ ಸಂದರ್ಭದಲ್ಲಿ ವಿದ್ಯುತ್ ಗ್ರಾಹಕರುಗಳು ಗೃಹ ಜ್ಯೋತಿ ಯೋಜನೆಯ ನೋಂದಣಿ ಸಂದರ್ಭದಲ್ಲಿ ನೀಡಿರುವ ಆಧಾರ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ನಲ್ಲಿ ಧಾಖಲಿಸಿರುವ ಮೊಬೈಲ್ ನಂಬರ್ ಇರುವ ಮೊಬೈಲ್ ದೂರವಾಣಿಗೆ ಪರಿಶೀಲನೆ ಸಂದರ್ಭದಲ್ಲಿ ಬರುವ OTP, ವೋಟರ್ ಐ ಡಿ, ರೇಷನ್ ಕಾರ್ಡ್ ಹಾಗೂ ಬಾಡಿಗೆದಾರ ರಾಗಿದ್ದಲ್ಲಿ ಬಾಡಿಗೆ ಒಪ್ಪಂದದ ಕರಾರು ಪತ್ರ ಮತ್ತು ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಪಾನ್ ಕಾರ್ಡ್ ನ್ನು ನೀಡಿ ಸಹಕರಿಸಬೇಕಾಗಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಳ್ಯ ಮತ್ತು ಸುಬ್ರಮಣ್ಯ ಉಪವಿಭಾಗ ರವರು ತಿಳಿಸಿದ್ದಾರೆ.
ಗೃಹ ಜ್ಯೋತಿ ಬಳಕೆದಾರರಿಗೆ ವಿಶೇಷ ಸೂಚನೆ

































































