ಸುಳ್ಯದಿಂದ ಮಡಿಕೇರಿ ರಸ್ತೆ ಮಧ್ಯೆ ರಸಪಾಕ ಹೋಟೆಲ್ ಬಳಿಯಲ್ಲಿ ನಿರ್ಮಿಸಿರುವ ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಅರಂಬೂರು ಟರ್ಫ್ ಗ್ರೌಂಡ್ ಇಂದು (ಜು.11, ಸಂಜೆ 6.30ಕ್ಕೆ) ಉದ್ಘಾಟನೆಗೊಳ್ಳಲಿದೆ.
ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ಮತ್ತು ಟೀಮ್ ಸಾಜ್ ಸ್ಪೋರ್ಟ್ಸ್ ನ ಶರತ್ ಅರಂಬೂರು ರವರ ನೇತೃತ್ವದಲ್ಲಿ ಸುಳ್ಯದಲ್ಲಿ ಪ್ರಥಮ ಬಾರಿಗೆ ನಿರ್ಮಿಸಿದ ಟರ್ಫ್ ಗೌಂಡ್ ಇದರ ಉದ್ಘಾಟನೆಯು ಸಂಜೆ ಗಂಟೆ 6.30 ನಡೆಯಲಿರುವುದು.
ಸುಮಾರು 9 ಸಾವಿರ ಚದರ ಅಡಿಯ ಮೈದಾನದಲ್ಲಿ ಫುಟ್ ಬಾಲ್,ಕ್ರಿಕೆಟ್ ಪಂದ್ಯಾಟವನ್ನು ಆಡಲು ಅವಕಾಶ ನೀಡಲಾಗುವುದು. ಕ್ರೀಡಾಸಕ್ತರಿಗೆ ಮುಕ್ತ ಅವಕಾಶವಿದ್ದು ಬೆಳಗ್ಗೆ ಗಂಟೆ 6.00 ರಿಂದ ರಾತ್ರಿ 11.30 ರ ತನಕ ಆಟವಾಡಲು ಅವಕಾಶವಿದೆ. ವಿದ್ಯಾರ್ಥಿಗಳಿಗೆ ನುರಿತ ತರಬೇತುದಾರರಿಂದ ಕೋಚಿಂಗ್ ನೀಡುವ ವ್ಯವಸ್ಥೆ ಇರುವುದು.
ಕೆಫೆ ಹಾಗೂ ಸಾಜ್ ಸ್ಪೋರ್ಟ್ಸ್ ವಸ್ತುಗಳ ಸಂಗ್ರಹದ ಮಳಿಗೆಯು ಇರುವುದು. ವಾಹನ ಪಾರ್ಕಿಂಗ್ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗುವುದು. ಸಂಘ ಸಂಸ್ಥೆಗಳ ಸದಸ್ಯರಿಗೆ, ಇಲಾಖೆಯ ಸಿಬ್ಬಂದಿಗಳಿಗೆ, ವಿದ್ಯಾರ್ಥಿಗಳಿಗೆ ಸಮಯಕ್ಕಾನುಸಾರವಾಗಿ ಮೊದಲು ನೋಂದಾವಣೆ ಮಾಡಿದ ತಂಡದವರಿಗೆ ಆದ್ಯತೆ ಮೇರೆಗೆ ಅವಕಾಶ ಒದಗಿಸಿಕೊಡಲಾಗುವುದು. ರಾತ್ರಿ ಆಟವಾಡಲು ಯಾವುದೇ ರೀತಿಯ ಅಡ್ಡಿಯಾಗದಂತೆ ಆಕರ್ಷಕ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕ್ರೀಡಾ ಪ್ರಿಯರಿಗೆ ಮುಕ್ತ ಅವಕಾಶವಿರುವುದಾಗಿ ಪಾಲುದಾರರು ತಿಳಿಸಿದ್ದಾರೆ.
ಅರಂಬೂರು : ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಟರ್ಫ್ ಗ್ರೌಂಡ್ ಇಂದು ಉದ್ಘಾಟನೆ

































































