ಅಂಗವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಗವಾಡಿ ಕಾರ್ಯಕರ್ತೆಯಾಗಬಯಸುವರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಸುಳ್ಯ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ತೆರವಾಗಿರುವ ಮರ್ಕಂಜ ಗ್ರಾಮದ ಮಿತ್ತಡ್ಕ, ಅಮರ ಮುಡ್ನೂರು ಗ್ರಾಮದ ದೊಡ್ಡತೋಟ, ಮತ್ತು ಕಡಬ ತಾಲೂಕಿನ ಐನೆಕಿದು ಗ್ರಾಮದ ಐನೆಕಿದು ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರ ಹುದ್ದೆಗೆ ಮತ್ತು ಸುಳ್ಯ ಕಸಬಾ ಗ್ರಾಮದ ವಾರ್ಡ್-13ರ ಬೂಡು, ವಾರ್ಡ್-16ರ ಕಾಯರ್ತೋಡಿ, ವಾರ್ಡ್-4ರ ಬೆಟ್ಟಂಪಾಡಿ, ಮರ್ಕಂಜ ಗ್ರಾಮದ ದಾಸರಬೈಲು, ದೇವಚಳ್ಳ ಗ್ರಾಮದ ಸೇವಾಜೆ, ವಾಲ್ತಾಜೆ, ಕಂದ್ರಪ್ಪಾಡಿ, ಮುಪ್ಪೇರಿಯ ಗ್ರಾಮದ ಇಂದ್ರಾಜೆ, ನಾಲ್ಕೂರು ಗ್ರಾಮದ ಮೆಟ್ಟಿನಡ್ಕ, ನಡುಗಲ್ಲು, ಅಮರಮುಡ್ನೂರು ಗ್ರಾಮದ ಹಾಸನಡ್ಕ ಮತ್ತು ಕಡಬ ತಾಲೂಕಿನ ಎಡಮಂಗಲ ಗ್ರಾಮದ ಮರ್ದೂರಡ್ಕ, ಏನೆಕಲ್ಲು ಗ್ರಾಮದ ದೇವರಹಳ್ಳಿ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅದೇ ಗ್ರಾಮದ 19-35 ವರ್ಷದ ಒಳಗಿನ ಮಹಿಳಾ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪಿ.ಯು.ಸಿ ತೇರ್ಗಡೆ ಆಗಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ 10ನೇ ತರಗತಿ ತೇರ್ಗಡೆ ಆಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10.08.2026ರ ಸಂಜೆ: 5-30ರೊಳಗೆ ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಸುಳ್ಯ, ಮೆಸ್ಕಾಂ ಕಛೇರಿ ಸಮೀಪ, ಕುರುಂಜಿಭಾಗ್ ಅಂಚೆ ಸುಳ್ಯ ತಾಲೂಕು ದ.ಕ.ಜಿಲ್ಲೆ ದೂರವಾಣಿ ಸಂಖ್ಯೆ: 08257-298139



























































































































Leave a Comment

Your email address will not be published. Required fields are marked *

error: Content is protected !!
Scroll to Top