ದೇವಸ್ಥಾನಗಳ ಹುಂಡಿಗಳಲ್ಲಿ ಭಕ್ತರು ನೀಡುವ ಕಾಣಿಕೆಯ ಭದ್ರತೆಗಾಗಿ ಮತ್ತು ಹಣದ ದುರುಪಯೋಗವನ್ನು ತಡೆಯಲು ಕರ್ನಾಟಕ ಸರ್ಕಾರವು ಕಟ್ಟುನಿಟ್ಟಾದ 19 ಅಂಶಗಳ ಮಾರ್ಗಸೂಚಿ (SOP) ಬಿಡುಗಡೆ ಮಾಡಿದೆ. ಸಿಸಿಟಿವಿ ಕಣ್ಗಾವಲು, ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಹಣ ಎಣಿಕೆಗೆ ಕಡ್ಡಾಯ ಆದೇಶ ನೀಡಲಾಗಿದೆ.ಮುಖ್ಯವಾಗಿ ಅನುಸರಿಸಬೇಕಾದ ಕ್ರಮಗಳು ಮತ್ತು ಭದ್ರತಾ ವ್ಯವಸ್ಥೆಗಳು ಈ ಕೆಳಗಿನಂತಿವೆ:ಸಿಸಿಟಿವಿ ಕಣ್ಗಾವಲು: ಎಲ್ಲಾ ಹುಂಡಿಗಳಿಗೆ ನಾಲ್ಕು ದಿಕ್ಕುಗಳಿಂದ ಕಾಣುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.ನೇರ ಮೇಲ್ವಿಚಾರಣೆ: ಕರ್ಪೂರ ಹಚ್ಚಿ ಸಿಸಿಟಿವಿ ಮಸುಕಾಗಿಸುವುದನ್ನು ತಡೆಯಲು ವೆಬ್ ಕ್ಯಾಮೆರಾಗಳನ್ನು ಬಳಸಲಾಗುವುದು. ಇದರ ನೇರ ಪ್ರಸಾರವನ್ನು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಠಾಣೆಗಳ ಡ್ಯಾಶ್‌ಬೋರ್ಡ್‌ಗಳಿಗೆ ಜೋಡಿಸಲಾಗುತ್ತದೆ.ಸುರಕ್ಷಿತ ಹುಂಡಿ ಎಣಿಕೆ: ದೇವಸ್ಥಾನದ ಖಾಸಗಿ ಸಿಬ್ಬಂದಿ ಅಥವಾ ಸ್ವಯಂಸೇವಕರು ಹುಂಡಿ ಎಣಿಸುವಂತಿಲ್ಲ. ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್‌ಗಳ ಸಮ್ಮುಖದಲ್ಲಿ ಮಾತ್ರ ಪಾರದರ್ಶಕವಾಗಿ ಹಣ ಎಣಿಕೆ ನಡೆಯಲಿದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.ಡಿಜಿಟಲ್ ಕಾಣಿಕೆ (QR ಕೋಡ್): ನಗದು ರಹಿತ ದೇಣಿಗೆಗೆ ಉತ್ತೇಜನ ನೀಡಲು ಪ್ರತಿ ಹುಂಡಿಯ ಬಳಿ ಕ್ಯೂಆರ್ ಕೋಡ್ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುವುದು. ಯಾವುದೇ ವಂಚನೆಯಾಗದಂತೆ ಇವುಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ.
ದೇವಾಲಯಗಳ ಕಾಣಿಕೆ ಹುಂಡಿಗಳ ಹಣದ ದುರುಪಯೋಗವನ್ನು ತಡೆಯಲು 19 ಅಂಶಗಳ ಮಾರ್ಗಸೂಚಿ ಬಿಡುಗಡೆ

































































