ಅರಂತೋಡಿನಲ್ಲಿ ಬಾಲಗೋಕುಲ ಪ್ರಶಿಕ್ಷಣ ವರ್ಗ

ಅರಂತೋಡು, ಸೆ. 20: ಸೇವಾ ಭಾರತಿ ಹೆಲ್ಪ್‌ಲೈನ್ ಟ್ರಸ್ಟ್ (ರಿ.), ಸುಳ್ಯ ಹಾಗೂ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ.), ಸುಳ್ಯ ಇದರ ಆಶ್ರಯದಲ್ಲಿ ಬಾಲಗೋಕುಲ ಪ್ರಶಿಕ್ಷಣ ವರ್ಗವು ಅರಂತೋಡು ಗ್ರಾಮದ ‘ಸಿರಿ ಸೌಧ’ ಸಭಾಂಗಣದಲ್ಲಿ ಸೆ. 20ರಂದು ನಡೆಯಿತು.
ದಕ್ಷಿಣ ಪ್ರಾಂತ ಬಾಲಗೋಕುಲ ಸಂಯೋಜಕರಾದ ಉಮೇಶ್ ಜಿ. ಅವರು ಪ್ರಶಿಕ್ಷಣ ವರ್ಗವನ್ನು ನಡೆಸಿಕೊಟ್ಟರು. ವೇದಾವತಿ ರೈ, ಅರಂತೋಡು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷೆ ಪುಷ್ಪಾ ಮೇದಪ್ಪ ಅಧ್ಯಕ್ಷತೆ ವಹಿಸಿದ್ದರು.
ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕದ ಗೋಪಾಲ ಜಿ. ಹಾಗೂ ದಮಯಂತಿ ಅಡ್ಕಬಲೆ ಅವರು ಪ್ರಶಿಕ್ಷಣ ವರ್ಗದ ನಿರ್ವಹಣೆ ಮಾಡಿದರು. ನಿವೃತ್ತ ಶಿಕ್ಷಕ ತೀರ್ಥರಾಮ ಅಡ್ಕಬಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಬಾಲಗೋಕುಲಗಳನ್ನು ನಡೆಸುತ್ತಿರುವವರು, ಮಾತಾಜಿಯರು, ಅಂಗನವಾಡಿ ಕಾರ್ಯಕರ್ತೆಯರು, ಟ್ರಸ್ಟ್‌ನ ವಿವಿಧ ಸಮಿತಿಗಳ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಾಲಗೋಕುಲ ಪುತ್ತೂರು ಜಿಲ್ಲಾ ಸಂಯೋಜಕ ಭುಕ್ಷಿತ್ ಐನೆಕಿದು ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.











































Leave a Comment

Your email address will not be published. Required fields are marked *

error: Content is protected !!
Scroll to Top