ಸುಳ್ಯ: ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ದ.ಕ. ಪೆರಾಜೆ ಘಟಕದ ವಾರ್ಷಿಕ ಮಹಾಸಭೆ ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು.
ಘಟಕದ ಅಧ್ಯಕ್ಷ ಚಂದ್ರಶೇಖರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಕುಮಾರಿಯರಾದ ಅನನ್ಯ ಕೆ.ಪಿ., ಭಾಮಿನಿ ಕೆ.ಪಿ. ಹಾಗೂ ಕುಶಲ್ಯ ಪಿ.ಡಿ. ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಸಭೆಯಲ್ಲಿ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್., ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್., ಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪಿ. ಪೈಚಾರ್ ಹಾಗೂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಗೌರವ ಉಪಸ್ಥಿತರಿದ್ದರು.
ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಚಂದ್ರಶೇಖರ ಪಿ.ಕೆ. ಕೋಡ್ಯಗುಂಡಿ, ಕಾರ್ಯದರ್ಶಿಯಾಗಿ ಪುರುಷೋತ್ತಮ ಕಂಜಿಪಿಲಿ, ಕೋಶಾಧಿಕಾರಿಯಾಗಿ ಅಶ್ರಫ್ ಪಿ.ಎಂ. ಹಾಗೂ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಪಿ.ಎಂ. ಆಯ್ಕೆಯಾದರು.
ನಿರ್ದೇಶಕರಾಗಿ ವೇಣುಗೋಪಾಲ ದೇವಮೂಲೆ, ಹರ್ಷಿತ್ ಮಜಿಕ್ಕೋಡಿ ಹಾಗೂ ರಾಮ್ ಪ್ರಸಾದ್ ಮೂಲೆಮಜಲು ಆಯ್ಕೆಯಾದರು.
ಅಬೂಬಕ್ಕರ್ ಪಿ.ಎಂ. ಸ್ವಾಗತಿಸಿದರು. ಹರ್ಷಿತ್ ಮಜಿಕ್ಕೋಡಿ ವಂದಿಸಿದರು.



















