ಜೇಸಿಐ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿಗೆ ಸುಪ್ರೀತ್ ಮೋಂಟಡ್ಕ ಆಯ್ಕೆ

ಸುಳ್ಯ: ಸಮಾಜದಲ್ಲಿ ಸದ್ದಿಲ್ಲದೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮೌನಸಾಧಕರನ್ನು ಗುರುತಿಸಿ ಗೌರವಿಸುವ ಜೇಸಿಐ ಭಾರತ ವಲಯ 15ರ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ವಿಭಾಗದ ವಲಯಾಧಿಕಾರಿಗಳ ವಿಶೇಷ ಮನ್ನಣೆಯ ಪ್ರಶಸ್ತಿಗೆ ಸುಪ್ರೀತ್ ಮೋಂಟಡ್ಕ ಭಾಜನರಾಗಿದ್ದಾರೆ.
ಜೇಸಿಐ ಸುಳ್ಯ ಪಯಸ್ವಿನಿ (ರಿ.) ವತಿಯಿಂದ ಆಯೋಜಿಸಲಾಗಿದ್ದ ಜೇಸಿಐ ಸಪ್ತಾಹ ‘ಸುಸ್ನಿಲ 2026’ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೇಸಿಐ ಭಾರತ ವಲಯ 15ರ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ವಲಯ ಸಂಯೋಜಕ ಜೆಎಫ್ಎಂ ಲೋಕೇಶ್ ಅಕ್ರಿಕಟ್ಟೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷೆ ಜೆಎಫ್ಎಂ ಲತಾಶ್ರೀ ಅವರ ನೇತೃತ್ವದ ವಿವಿಧ ಕಾರ್ಯಕ್ರಮಗಳಿಗೆ ಸುಪ್ರೀತ್ ಮೋಂಟಡ್ಕ ಅವರು ತೆರೆಯ ಮರೆಯಲ್ಲಿ ಸದಾ ಬೆಂಬಲವಾಗಿ ನಿಂತು, ಪ್ರತಿಯೊಂದು ಜೇಸಿಐ ಕಾರ್ಯಕ್ರಮದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ, ಧಾರ್ಮಿಕ, ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವ ಅವರು ತಮ್ಮ ಸೇವಾ ಚಟುವಟಿಕೆಗಳ ಮೂಲಕ ವಲಯ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಬ್ದುಲ್ಲಾ ಎ., ಗುರುರಾಜ್ ಅಜ್ಜಾವರ, ರವಿರಾಜ್ ಅಡ್ಕಾರ್, ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್‌ನ ಶ್ರೀಹರಿ ಪೈಂದೋಡಿ, ಪ್ರಸನ್ನ ಐವರ್ನಾಡು, ಗುರುಪ್ರಸಾದ್ ನಾಯಕ್, ತಾರಾ ಚೂಂತಾರು, ಸುರೇಶ್ ಕಾಮತ್, ವಿನೋದ್ ಮೂಡಗದ್ದೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.































Leave a Comment

Your email address will not be published. Required fields are marked *

error: Content is protected !!
Scroll to Top