ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ – ವ್ಯವಹಾರ ತರಬೇತಿ ಕಾರ್ಯಾಗಾರ































ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ ಜೇಸಿಐ ಸಪ್ತಾಹ ಸುಸ್ನಿಲ 2026 ಅಂಗವಾಗಿ ಸುಳ್ಯದ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಬೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಿತು.

ಘಟಕಾಧ್ಯಕ್ಷರಾದ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಮಾಹಿತಿ ತಜ್ಞರಾಗಿ ಜೇಸಿಐ ಭಾರತ ವಲಯ 15ರ ಪ್ರೊವಿಷನಲ್ ನ್ಯಾಷನಲ್ ಟ್ರೖನರ್ ಜೇಸಿಐ ಸೆನೆಟರ್ ಪೀಟರ್ ಅಂಥೋನಿ ಪಿಂಟೋ ಭಾಗವಹಿಸಿ Communicate- Connect – Create Loyalty
Turning Conversations into Connectios and Connections into Lasting Relationship
ವಿಷಯದ ಬಗ್ಗೆ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ವಲಯ 15ರ Buy from JC and B2B ವಲಯ ಸಂಯೋಜಕರಾದ ಜೇಸಿ ಹೆಚ್ ಜಿ ಎಪ್ ವಿಷ್ಣುಪ್ರಕಾಶ್ ನಾರ್ಕೋಡು,
ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವ ಸದಸ್ಯರರಾದ ರೊ. ಬಾಲಕೃಷ್ಣ ಎಂ, ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಯು.ಪಿ ಶಿವಾನಂದ ಭಾಗವಹಿಸಿ ಶುಭ ಹಾರೈಸಿದರು.

ಪೂರ್ವಾಧ್ಯಕ್ಷರಾದ ನವೀನ್ ಕುಮಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ
ಅತಿಥಿಗಳನ್ನು ಸ್ವಾಗತಿಸಿದರು.
ಮಹೇಶ್ ಮೇರ್ಕಜೆ ಅತಿಥಿಗಳನ್ನು ವೇದಿಕೆಗೆ ಅಹ್ವಾನಿಸಿದರು.
ಸುನಿತಾ ರವಿಕುಮಾರ್ ಜೇಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ತಾರಾ ಚೂಂತಾರು ವಂದಿಸಿದರು. .
ತರಬೇತಿ ಕಾರ್ಯಾಗಾರದಲ್ಲಿ ಸಹಕಾರಿ ರತ್ನ ಚಂದ್ರ ಕೋಲ್ಚಾರ್, ನವೀನ್ ಚಾತುಬಾಯಿ, ಜೇಸಿಐ ಸುಳ್ಯ ಪಯಸ್ವಿಯ ಸದಸ್ಯರು, ಜೇಸಿಐ ಸುಳ್ಯ ಸಿಟಿಯ ಅಧ್ಯಕ್ಷರು, ಕಾರ್ಯದರ್ಶಿ, ಸಫಲಾ ಉದ್ಯಮದ ಸಿಬ್ಬಂದಿಗಳು, ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

.

Leave a Comment

Your email address will not be published. Required fields are marked *

error: Content is protected !!
Scroll to Top