ಬೆಳ್ಳಾರೆ ಪೆರ್ಲಂಪಾಡಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ಶೇಣಿಯಲ್ಲಿ ಆ.31ರಂದು ರಸ್ತೆ ಬದಿಗೆ ಮೆಸ್ಕಾಂನವರು ಹಾಕಿದ ಅಂಡರ್ ಗ್ರೌಂಡ್ ಕೇಬಲ್ ಚರಂಡಿಯಲ್ಲಿ ಬಸ್ಸಿನ ಚಕ್ರ ಹೂತು ಹೋಗಿ ಪ್ರಯಾಣಿಕರು ಸಮಸ್ಯೆಗೊಳಗಾದ ಘಟನೆ ವರದಿಯಾಗಿದೆ.
ಎಲೆಮಲೆ ಪೈಲಾರು – ಚೊಕ್ಕಾಡಿ – ಬೆಳ್ಳಾರೆ – ಪೆರ್ಲಂಪಾಡಿ ಮೂಲಕ ಪುತ್ತೂರಿಗೆ ಹೋಗುವ ಈ ಬಸ್ಸಿನಲ್ಲಿ ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ಹೋಗುವ ಪ್ರಯಾಣಿಕರೇ ಹೆಚ್ಚಾಗಿ ಇದ್ದರು. ಪೆರ್ಲಂಪಾಡಿ ಮೂಲಕ ಪುತ್ತೂರಿಗೆ ಸಂಚರಿಸುವ ಒಂದೇ ಬಸ್ಸ್ ಇದಾಗಿದ್ದು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತಲುಪಲು ಸಾಧ್ಯವಾಗದೆ ಇಕ್ಕಟ್ಟಿನಲ್ಲಿ ಸಿಲುಕಿಕೊಂಡರೆ ಉದ್ಯೋಗಸ್ಥಗೆ ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪಲು ಸಾಧ್ಯವಾಗಿಲ್ಲ.
ಬೆಳ್ಳಾರೆ : ಬಸ್ಸಿನ ಚಕ್ರ ಮೆಸ್ಕಾಂನವರು ತೋಡಿದ ಕಣಿಯಲ್ಲಿ ಹೂತು ಹೋಗಿ ಸಮಸ್ಯೆಗೊಳಗಾದ ಪ್ರಯಾಣಿಕರು



















