ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಈ ಸಹಕಾರಿ ವರ್ಷದಲ್ಲಿ ರೂ.2.64′ ಕೋಟಿ ನಿವ್ವಳ ಲಾಭಗಳಿಸಿದ್ದು ,ಶೇ.15 ಡಿವಿಡೆಂಟ್ ಹಾಗೂ ಮಹಾಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಗಿಪ್ಟ್ ವಿತರಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಕೆ.ಸಿ ಸದಾನಂದ ತಿಳಿಸಿದ್ದಾರೆ.
ಅವರು ಕೊಡಿಯಾಲ ಬೈಲ್ ಗೌಡ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 1997 ಗೌಡರ ಯುವ ಸೇವಾ ಸಂಘ (0) ಸುಳ್ಯ ಇವರಿಂದ ಪ್ರವರ್ತಿಸಲ್ಪಟ್ಟಿದ ಟ್ಟಿದ್ದು, ಪ್ರಾರಂಭದಲ್ಲಿ 435 ಸದಸ್ಯರಿಂದ 1,134 ವರ್ಗದ 435 ಸದಸ್ಯರಿಂದ ಪ್ರಾರಂಭವಾದ ಈ ಸಂಘದಲ್ಲಿ ಪ್ರಸ್ತುತ 23,124 ವಿವಿಧ ವರ್ಗದ ಸದಸ್ಯರಿದ್ದು ವ್ರತಾ ಸಾಲ, ಗೃಹಸಾಲ, ಸದಸ್ಯರಿದ್ದು, ಇವರಿಂದ ರೂ 5.30 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ. ಸದಸ್ಯರ ಅನುಕೂಲಕ್ಕಾಗಿ ವಾಣಿಜ್ಯ ಕಟ್ಟಡ ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭದ್ರತಾ ಸಾಲ, ಗೃಹ ಸಾಲ,ಸದಸ್ಯ ವೇತನ ಜಮೀನು ಖರೀದಿ ಸಾಲ, ಚಿನ್ನಾಭರಣ ಈಡಿನ ಸಾಲ ,ವೇತನ ಸಾಲ,ಜಮೀನು ಅಡವು ಸಾಲ, , ವ್ಯಾಪಾರ ಸಾಲ ಹಾಗೂ ಜಾಮೀನು ಸಾಲಗಳನ್ನು ನೀಡುತ್ತಿದ್ದು, ಹಾಗೇಯೆ ಈ ಸ್ಟಾಂಪಿಂಗ್ ವಿತರಣೆ. RTGS/NEFT ಸೌಲಭ್ಯವನ್ನು ನೀಡುತ್ತಿದ್ದೇವೆ. ಸಂಸ್ಥೆಯ ಕಾರ್ಯವ್ಯಾಪ್ತಿಯು ರಾಜ್ಯಮಟ್ಟದಾಗಿದ್ದು, ಸಂಘವು ಈಗಾಗಲೇ ರಾಜ್ಯದ చిವಿಧ ಭಾಗಗಳಲ್ಲಿ 24 ಶಾಖೆಗಳನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದೆ.
ವರದಿ ವರ್ಷದಲ್ಲಿ ನಮ್ಮ ಸಹಕಾರಿ ಸಂಘವು ರೂ 278.92 ಕೋಟಿ ಠೇವಣಿ , ಸಾಲಗಳನ್ನು ಸದಸ್ಯರುಗಳಿವೆ ವಿತರಿಸುತ್ತಿದೆ. ಬಂಡವಾಳವು ರೂ 310.31 ಕೋಟಿ ಇದ್ದು ಸಂಘವು ಒಟ್ಟು ರೂ 1.582ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರವನ್ನು ನಡೆಸಿ ಈ ಸಹಕಾರಿ ವರ್ಷದಲ್ಲಿ 2,64,15,821.66 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ರಷ್ಟು ವಿತರಿಸುತ್ತಿದ್ದೇವೆ. ಸಂಘದಲ್ಲಿ ಒಟ್ಟು ರೂ. 3,97,21,428.39 ಕ್ಷೇಮನಿಧಿ ಹಾಗೂ 9,23,44,189.78 ಇತರ ನಿಧಿ ಇದ್ದು ಪ್ರಸ್ತುತ ಸಂಘವು .4,60,39,226.32 ಮೌಲ್ಯದ ಚರಾಸ್ತಿ ಹಾಗೂ 2,40,93,469.32 ಸ್ಥಿರಸ್ಥಿಯನ್ಬು ಹೊಂದಿದೆ. ಸಂಘಕ್ಕೆ ಸುಳ್ಯದ ಮೊಗರ್ಪಣೆಯಲ್ಲಿ ಮುಖ್ಯ ರಸ್ತೆ ಪಕ್ಕ 36.25 ಸೆಂಟ್ಸ್ ಸ್ವಂತ ಜಾಗ ಇದ್ದು, ಈ ಜಾಗದಲ್ಲಿ ಸಂಘಕ್ಕೆ ಸುಸಜ್ಜಿತವಾದ ವಾಣಿಜ್ಯ ಮಳಿಗೆಗಳನ್ನೊಳಗೊಂಡ ಕಟ್ಟಡವನ್ನು ನಿರ್ಮಿಸಿರುತ್ತೇವೆ. ನೆಲ ಅಂತಸ್ತಿನಲ್ಲಿ ಸುಳ್ಯ ಶಾಖೆ ಕಾರ್ಯ ನಿರ್ವಹಿಸುತ್ತಿದ್ದು, 1ನೇ ಮಹಡಿಯಲ್ಲಿ ವಿಶಾಲವಾದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಆಡಳಿತ ಕಛೇರಿ, ಸಭಾಭವನ, ಅತಿಥಿಗೃಹ ನಿರ್ಮಿಸಿರುತ್ತೇವೆ. ಹಾಗೂ ಇದೀಗ 1.47 ಕೋಟಿ ವೆಚ್ಚದಲ್ಲಿ ಸಂಘಕ್ಕೆ 2 ನೇ ಮಹಡಿಯನ್ನು ನಿರ್ಮಿಸಿದ್ದು, KMF ಹಾಗೂ ಇತರ ಗ್ರಾಹಕರು ಬಾಡಿಗೆ ನೆಲೆಯಲ್ಲಿ ಬಂದಿರುತ್ತಾರೆ. ಇದರ ಕೆಲಸ ಕಾರ್ಯಗಳು ಪ್ರಗತಿಯಲ್ಲಿರುತ್ತದೆ. ಸಂಘದ ಹೆಚ್ಚಿನ ಎಲ್ಲಾ ಶಾಖೆಗಳಲ್ಲಿ ಇ ಸ್ಟಾಂಪಿಂಗ್ ಮಾಡುತ್ತಿದ್ದು, ಸುಳ್ಯ ಶಾಖೆಯಲ್ಲಿ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯವನ್ನು ಸದಸ್ಯರಿಗೆ ನೀಡುತ್ತಿದ್ದೇವೆ. ಅಲ್ಲದೇ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95 ಕ್ಕಿಂತ ಅಧಿಕ ಅಂಕ ಪಡೆದ ನಮ್ಮ ಸಂಘದ ವಿವಿಧ ಶಾಖೆಗಳ ಸದಸ್ಯರ 35 ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಮಾಡಿರುತ್ತೇವೆ ಎಂದು ಹೇಳಲು ಸಂತೋಷಪಡುತ್ತೇವೆ.
ಸಂಘದ ಮುಂದಿನ 25 ನೇ ಶಾಖೆಯಾಗಿ ಸುಳ್ಯ ತಾಲೂಕಿನ ಗುತ್ತಿಗಾರ್ನಲ್ಲಿ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ನಮ್ಮ ಸಂಘವು ಜನರಲ್ಲಿ ಉಳಿತಾಯ ಮನೋಭಾವನೆಯನ್ನು ಬೆಳೆಸುವುದು, ಕೃಷಿಕರು, ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಒದಗಿಸುವುದು, ಮತ್ತು ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ನೆರವಾಗುವ ಉದ್ದೇಶವನ್ನು ಹೊಂದಿದೆ. ಸಹಕಾರಿ ಬಂಧುಗಳು ನಮ್ಮ ಸಹಕಾರಿ ಸಂಘದಲ್ಲಿ ವ್ಯವಹರಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಕೈ ಜೋಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ
ಉಪಾಧ್ಯಕ್ಷ
ದಿನೇಶ ಮಡಪ್ಪಾಡಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ,ನಿರ್ದೇಶಕರುಗಳು:ಪಿ.ಸಿ. ಜಯರಾಮ, ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ
ತೀರ್ಥರಾಮ, ಚಂದ್ರ ಕೋಲ್ಟಾರ್, ಪಿ.ಎಸ್ ಗಂಗಾಧರ, ಮೋಹನ್ರಾಂ ಸುಳ್ಳಿ, ಲಕ್ಷ್ಮೀನಾರಾಯಣ ನಡ್ಕ, ದಾಮೋದರ ನಾರ್ಕೋಡು, ಜಯಲಲಿತಾ ಕೆ.ಎಸ್. ನಳಿನಿ ಸೂರಯ್ಯ, ದೊಡ್ಡಣ್ಣ ಬರೆಮೇಲು, ಸದಾನಂದ ಮಾವಜಿ, ಪ್ರೇಮ ಕೆ ಎಲ್. ಜ್ಞಾನೇಶ್ ಎನ್ ಎ ಉಪಸ್ಥಿತರಿದ್ದರು.




















