ಪರಿಸರ ಕಾಳಜಿ, ಜನಜಾಗೃತಿ ಮೂಡಿಸುವ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ರೂಪಿಸುವ ಕೆಲಸವನ್ನು ಜೇಸಿಐ ಸುಳ್ಯ ಪಯಸ್ವಿನಿ ಮಾಡುತ್ತಿದೆ. ಯಾವುದನ್ನು ಹೇಗೆ ಸದ್ಬಳಕೆ ಮಾಡಬೇಕು ಎಂಬ ಅರಿವು ಜನರಲ್ಲಿ ಮೂಡಿದಾಗ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ಘನ ಸರ್ಕಾರದ ಮಾಜಿ ಸಚಿವ ಎಸ್. ಅಂಗಾರ ಹೇಳಿದರು.
ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸೆ. 6ರಂದು ಸುಳ್ಯದ ವೆಂಕಟ್ರಮಣ ಕೋ-ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಶ್ರೀ ಭೋಜಪ್ಪ ಗೌಡ ಸಭಾಂಗಣದಲ್ಲಿ ಘಟಕಾದ್ಯಕ್ಷೆ ಜೆ ಎಪ್ ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ‘ಸಸ್ಟೇನೆಬಲ್ ಸಿಪ್ಪಿಂಗ್ ಡೇ’ ಕಾರ್ಯಕ್ರಮದಲ್ಲಿ ಸ್ಟೀಲ್ ಬಾಟಲ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಲಯ 15, ಜೇಸಿಐ ಭಾರತದ ಸಮುದಾಯ ಅಭಿವೃದ್ಧಿ ವಿಭಾಗದ ವಲಯ ನಿರ್ದೇಶಕ ಜೆಎಫ್ಡಿ ವಿಘ್ನೇಶ್ ಪ್ರಸಾದ್ ರಾವ್ ಭಾಗವಹಿಸಿ ಮಾಹಿತಿ ನೀಡಿದರು. ಅವರನ್ನು ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಸಂಶುದ್ದೀನ್, ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ಹಾಗೂ ಜೇಸಿಐ ಭಾರತ ವಲಯ 15ರ ಪೂರ್ವ ವಲಯಾಧ್ಯಕ್ಷರಾದ ಪಿಪಿಪಿ ಅಶೋಕ್ ಚೂಂತಾರು ಉಪಸ್ಥಿತರಿದ್ದು ಶುಭ ಹಾರೖಸಿದರು.
ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷರಾದ ಸುರೇಶ್ ಕಾಮತ್, ಕಾರ್ಯದರ್ಶಿ ತಾರಾ ಚೂಂತಾರು ಉಪಸ್ಥಿತರಿದ್ದರು.
ಜೇಸಿ ಪ್ರಶಾಂತ್ ಅಂಬೆಕಲ್ಲು ಜೇಸಿ ವಾಣಿ ವಾಚಿಸಿದರು. ಪೂರ್ವವಾಧ್ಯಕ್ಷರಾದ ರಂಜಿತ್ ಕುಕ್ಕೆಟ್ಟಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ನವೀನ್ ಕುಮಾರ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಜೇಸಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೊಂಟಡ್ಕ ಸ್ವಾಗತಿಸಿ, ತಾರಾ ಮಾಧವ ಚೂಂತಾರು ವಂದಿಸಿದರು.




















