ಸುಳ್ಯ: ಸುಳ್ಯ ತಾಲೂಕು ಮಿಲಾದ್ ಸಮಿತಿ ವತಿಯಿಂದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ಸುಳ್ಯದಲ್ಲಿ ಬೃಹತ್ ಮೀಲಾದ್ ಸಂದೇಶ ಕಾಲ್ನಡಿಗೆ ಜಾಥಾ ನಡೆಯಿತು.
ಮೊಗರ್ಪಣೆ ಯಿಂದ ಆರಂಭಗೊಂಡ ಜಾಥಾವು ಸುಳ್ಯ ಗಾಂಧಿನಗರದವರೆಗೆ ಸಾಗಿತು. ಜಾಥಾದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದವರು ಭಾಗವಹಿಸಿದ್ದರು
ಜಾಥಾದಲ್ಲಿ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ, ಅನ್ಸಾರ್ ಅಧ್ಯಕ್ಷ ಕೆ.ಬಿ. ಇಬ್ರಾಹಿಂ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಿಲಾದ್ ಸಮಿತಿ ಅಧ್ಯಕ್ಷ ಮುನಾಫರ್, ಸಿದ್ದೀಕ್ ಕೊಕ್ಕೋ, ಸಮಿತಿ ಪದಾಧಿಕಾರಿಗಳಾದ ರಶೀದ್ ಜಟ್ಟಿಪ್ಪಳ್ಳ, ಇಕ್ಬಾಲ್ ಸುಣ್ಣಮೂಲೆ, ಖಲಂದರ್ ಎಲಿಮಲೆ, ನಜೀರ್ ಶಾಂತಿನಗರ, ಮನ್ಸೂರ್ ಮೆಟ್ರೋ ಹಾಗೂ ಅನಿವಾಸಿ ಉದ್ಯಮಿ ಇಕ್ಬಾಲ್ ಕನಕಮಜಲು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಾಥಾದ ಸಂದರ್ಭದಲ್ಲಿ ಮೀಲಾದ್ ಸಂದೇಶ, ಪ್ರವಾದಿ ಮುಹಮ್ಮದ್ ﷺ ಅವರ ಜೀವನ ಮತ್ತು ಮಾನವೀಯ ಮೌಲ್ಯಗಳ ಕುರಿತು ಮದ್ಹ್ ಗೀತೆಗಳಿಗೆ ದಫ್ ತಂಡವು ಮೆರುಗು ನೀಡಿತು. ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.





















