ಸುಳ್ಯ–ತೊಡಿಕಾನ ನಡುವೆ ಕೆಎಸ್‌ಆರ್‌ಟಿಸಿ ನೂತನ ಬಸ್ ಸೇವೆಗೆ ಚಾಲನೆ

ಸುಳ್ಯ: ಸುಳ್ಯದಿಂದ ತೊಡಿಕಾನಕ್ಕೆ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆ ಸೆ.16ರಿಂದ ಆರಂಭಗೊಂಡಿದ್ದು, ಹಲವು ವರ್ಷಗಳಿಂದ ಈ ಭಾಗದ ಜನರು ಹೊಂದಿದ್ದ ಸಾರಿಗೆ ಸೌಲಭ್ಯದ ಬೇಡಿಕೆಗೆ ಸ್ಪಂದನೆ ದೊರೆತಂತಾಗಿದೆ.
ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ನೂತನ ಬಸ್ ಸೇವೆಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅವರು ತೆಂಗಿನಕಾಯಿ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೊಡಿಕಾನ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸುಳ್ಯ ನಗರಕ್ಕೆ ಸಂಚರಿಸಲು ಈ ನೂತನ ಬಸ್ ಸೇವೆ ಅನುಕೂಲವಾಗಲಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ನಿತ್ಯದ ಸಂಚಾರಕ್ಕೆ ಹೆಚ್ಚಿನ ನೆರವು ದೊರೆಯಲಿದೆ.
ಕಾರ್ಯಕ್ರಮದಲ್ಲಿ ಸುಳ್ಯ ಸೂಡ ಅಧ್ಯಕ್ಷ ಮುಸ್ತಾಪ,
ಕೆ.ಎಸ್.ಆರ್‌.ಟಿ.ಸಿ ಸುಳ್ಯ ಘಟಕ ವ್ಯವಸ್ಥಾಪಕರಾದ ಸತ್ಯಲತಾ,ಘಟಕದ ಅಧಿಕಾರಿಗಳಾದ ಪದ್ಮನಾಥನ್,ಹರೀಶ್ ಜಾಲ್ಸೂರು, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಅರಂತೋಡು–ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ರಾಧಾಕೃಷ್ಣ ಬೊಳ್ಳೂರು, ಅರಂತೋಡು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೇಶವ ಅಡ್ತಲೆ, ಲಯನ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಶಶೀಧರ ಎಂ.ಜೆ,ವಿಜೇಶ್ ಹಿರಿಯಡ್ಕ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಗೋಕುಲದಾಸ್, ಧೀರಾ ಕ್ರಾಸ್ತಾ, ರಕ್ಷಿತ್ ದೊಡ್ಡಡ್ಕ, ಧರ್ಮಪಾಲ ಕೊಯಿಂಗಾಜೆ, ಬೋಜಪ್ಪ ನಾಯ್ಕ, ಅಬ್ಬಾಸ್ ಅಡ್ಪಂಗಾಯ, ವಿನಯಕುಮಾರ್ ಕಂದಡ್ಕ, ಎ.ಟಿ. ಕುಸುಮಾಧರ, ನಾರಾಯಣ ಶಾಂತಿನಗರ, ರಾಜು ಪಂಡಿತ್, ಜಿನ್ನಪ್ಪ ಪೂಜಾರಿ, ನಂದರಾಜ್ ಸಂಕೇಶ, ಸತೀಶ್ ನಾಯ್ಕ,ಕೆ.ಕೆ ಬಾಲಕ್ರಷ್ಣ ಕುಂಟುಕಾಡು, ತಿಮ್ಮಯ್ಯ ಮೆತ್ತಡ್ಕ, ರವೀಂದ್ರ ಪೂಜಾರಿ ತೊಡಿಕಾನ, ಗೋವರ್ಧನ ಬೊಳ್ಳೂರು, ನಿಕೇಶ್ ಉಬರಡ್ಕ ,ನಾಗೇಶ ಮೇಸ್ತ್ರಿ











































ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top