ತೊಡಿಕಾನ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಗುರುವಾರ ಬೆಳಗ್ಗೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶವನ್ನು ಮುನ್ನಡೆಸಲು ಅಗತ್ಯವಿರುವ ಅಪಾರ ಶಕ್ತಿ–ಸಾಮರ್ಥ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
ದೇಶದ ಪ್ರಗತಿ, ಸುರಕ್ಷತೆ ಹಾಗೂ ಪ್ರತಿಯೊಬ್ಬ ಪ್ರಜೆಯ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಯವರು ಕೈಗೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ದೈವಿಕ ಮಾರ್ಗದರ್ಶನ ಮತ್ತು ಆಶೀರ್ವಾದ ಸದಾ ಇರಲಿ. ‘ವಿಶ್ವಗುರು ಭಾರತ’ದ ಕನಸು ನನಸಾಗಲಿ, ನವ ಭಾರತದ ನಿರ್ಮಾಣಕ್ಕಾಗಿ ಹಾಗೂ ಭಾರತವನ್ನು ಜಗತ್ತಿನ ಮುಂಚೂಣಿ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಲಾಯಿತು.
ಅಖಂಡ ಭಾರತದ ನಾಯಕತ್ವ ವಹಿಸಿಕೊಂಡಿರುವ ಪ್ರಧಾನಮಂತ್ರಿಯವರಿಗೆ ಮುಂಬರುವ ದಿನಗಳಲ್ಲಿ ಇನ್ನಷ್ಟು ದೇಶಸೇವೆ ಮಾಡುವ ಶಕ್ತಿ ಹಾಗೂ ಸಾಮರ್ಥ್ಯವನ್ನು ಭಗವಂತ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಪುಷ್ಪಮೇದಪ್ಪ, ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ, ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ, ಮಂಡಲ ಸಮಿತಿ ಸದಸ್ಯ ಪ್ರಶಾಂತ್ ಕಾಪಿಲ, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಶಕ್ತಿಕೇಂದ್ರ ಪ್ರಮುಖ ಚಂದ್ರಶೇಖರ್, ಪ್ರಮುಖರಾದ ದೀಪಕ್ ಕುತ್ತಮೊಟ್ಟೆ, ಶೇಖರ ಚೊಡಿಪಣೆ ಹಾಗೂ ಬೂತ್ ಸಮಿತಿ ಕಾರ್ಯದರ್ಶಿ ಮನ್ವಿತ್ ಉಪಸ್ಥಿತರಿದ್ದರು.
ಮೋದಿಯವರ ಹುಟ್ಟುಹಬ್ಬ: ತೊಡಿಕಾನ ಮಲ್ಲಿಕಾರ್ಜುನ ದೇವಾಲಯದಲ್ಲಿ ಶಾಸಕಿ ಭಾಗೀರಥಿ ಮುರುಳ್ಯರಿಂದ ವಿಶೇಷ ಪೂಜೆ

























