ಸಂಪಾಜೆ, ಸೆ.18: ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.) ಸಂಪಾಜೆ-ಕಲ್ಲುಗುಂಡಿ ಇದರ ಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷೆ ದೇವಕಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.ಸಂಜೀವಿನಿ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯು ರಾಷ್ಟ್ರಗೀತೆಯೊಂದಿಗೆ ಸಮಾರೋಪಗೊಂಡಿತು. ಸಭೆಯಲ್ಲಿ ತಾಲೂಕು ಪಂಚಾಯತ್ನ ವಲಯ ಮೇಲ್ವಿಚಾರಕಿ ಶ್ರೀಮತಿ ರೂಪ ಅವರು ಭಾಗವಹಿಸಿ ಲೋಕೋಸ್ ಹಾಗೂ ಇ-ಕೆವೈಸಿ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ಅಕ್ಕ ಕೆಫೆ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಸಾಲದ ಬೇಡಿಕೆ ಸಲ್ಲಿಸಿದ್ದ ಸಂಘಗಳ ಅರ್ಹ ಸದಸ್ಯೆಯರಿಗೆ ವಲಯ ಮೇಲ್ವಿಚಾರಕಿ ಶ್ರೀಮತಿ ರೂಪ ಅವರ ಉಪಸ್ಥಿತಿಯಲ್ಲಿ ಸಾಲ ವಿತರಿಸಲಾಯಿತು.ಕೃಷಿ ಸಖಿ ಇಲಾಖೆಗಳ ವಿವಿಧ ಯೋಜನೆಗಳು ಹಾಗೂ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡರು. ಅಲ್ಲದೆ, ಅಕ್ಟೋಬರ್ 6ರಂದು ಕೃಷಿ ವಿಜ್ಞಾನ ಕೇಂದ್ರ, ದ.ಕ. ಮಂಗಳೂರುನಲ್ಲಿ ಅಣಬೆ ಕೃಷಿ ತರಬೇತಿ ನಡೆಯಲಿದ್ದು, ಆಸಕ್ತರು ಭಾಗವಹಿಸುವಂತೆ ತಿಳಿಸಿದರು.ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ಕೃಷಿ ಸಖಿ, ಪಶು ಸಖಿ ಮಾಲತಿ, ಎಲ್ಸಿಆರ್ಪಿ ಸೌಮ್ಯ ಮತ್ತು ಭಾರತಿ ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಎಂ.ಬಿ.ಕೆ. ಕಾಂತಿ ಬಿ.ಎಸ್. ನೆರವೇರಿಸಿದರು. ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಸ್ವಾಗತಿಸಿದರು. ಉಪಕಾರ್ಯದರ್ಶಿ ಕಾವ್ಯ ವಂದಿಸಿದರು.
ಸಂಪಾಜೆ-ಕಲ್ಲುಗುಂಡಿ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ

























