October 7, 2026

ಮಕ್ಕಳ ಮನಸಿಗೆ ಮುದ, ಜ್ಞಾನಕ್ಕೆ ಹೊಸ ದಾರಿ,ಅ.9ರಿಂದ ಸುಳ್ಯದಲ್ಲಿ ‘ಸಂಕಲ್ಪ ಮಕ್ಕಳ ಹಬ್ಬ’

ಸುಳ್ಯ: ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜತೆಗೆ ಅವರಲ್ಲಿ ಪರಿಸರ ಪ್ರಜ್ಞೆ, ಸಾಮಾಜಿಕ ಹೊಣೆಗಾರಿಕೆ, ಮಾತೃಭಾಷೆ, ಸಂಸ್ಕೃತಿ ಹಾಗೂ ವೈಜ್ಞಾನಿಕ ಚಿಂತನೆ ಬೆಳೆಸುವ ಉದ್ದೇಶದಿಂದ ‘ಸಂಕಲ್ಪ ಮಕ್ಕಳ ಹಬ್ಬ–2026’ ಅ.9ರಿಂದ 11ರವರೆಗೆ ಸುಳ್ಯದ ಅಮರಶ್ರೀಭಾಗ್‌ನ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ.ರಂಗಮಯೂರಿ ಕಲಾ ಶಾಲೆ (ರಿ.) ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳು,

ಮಕ್ಕಳ ಮನಸಿಗೆ ಮುದ, ಜ್ಞಾನಕ್ಕೆ ಹೊಸ ದಾರಿ,ಅ.9ರಿಂದ ಸುಳ್ಯದಲ್ಲಿ ‘ಸಂಕಲ್ಪ ಮಕ್ಕಳ ಹಬ್ಬ’ Read More »

ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕರುಣಾಕರ ನಿಧನ

ಸುಳ್ಯ: ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ಐವರ್ನಾಡು ಗ್ರಾಮದ ಉದ್ದಂಪಾಡಿ ನಿವಾಸಿ ಕರುಣಾಕರ ಅವರು ಅ.6ರಂದು ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.ಮೃತರು ತಾಯಿ ಸರಸ್ವತಿ, ಪತ್ನಿ ಅಶ್ವಿನಿ ಎಂ., ಪುತ್ರರಾದ ಸಚಿನ್, ಚೇತನ್ ಹಾಗೂ ಪ್ರತೀಕ್, ಸಹೋದರಿ, ಸಹೋದರರು ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಬಳಗ ಹಾಗೂ ಪರಿಚಿತರಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕರುಣಾಕರ ನಿಧನ Read More »

ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಸುವರ್ಣ ಮಹೋತ್ಸವ ಕಛೇರಿ ಉದ್ಘಾಟನೆ

ಅರಂತೋಡು: ಬದ್ರಿಯಾ ಜುಮ್ಮಾ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ (ರಿ.) ಅರಂತೋಡು ಇದರ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ, ಅರಂತೋಡಿನ ಪಟೇಲ್ ವಾಣಿಜ್ಯ ಸಂಕೀರ್ಣದಲ್ಲಿ ನೂತನ ಸುವರ್ಣ ಮಹೋತ್ಸವ ಕಚೇರಿಯ ಉದ್ಘಾಟನೆ ಕಾರ್ಯಕ್ರಮವು ಅ.3 ರಂದು ನೆರವೇರಿತು. ಉದ್ಘಾಟನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರು (ಸಚಿವ ದರ್ಜೆ), ಎಎಚ್‌ವೈಎ ಸಂಸ್ಥೆಯ ಗೌರವಾಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ನೆರವೇರಿಸಿದರು.ಉದ್ಘಾಟಿಸಿ ಮಾತನಾಡಿದ ಟಿ.ಎಂ.

ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಸುವರ್ಣ ಮಹೋತ್ಸವ ಕಛೇರಿ ಉದ್ಘಾಟನೆ Read More »

ಸುಳ್ಯ : ಪುಟ್‌ಪಾತ್‌ ತೆರೆದು ಕಾಮಗಾರಿ, ಚರಂಡಿಗೆ ಬಿದ್ದ ಮಗು!

ಸುಳ್ಯ: ನಗರದ ಶ್ರೀರಾಮಪೇಟೆಯ ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಪೈಪ್‌ ಕಾಮಗಾರಿ ನಡೆಯುತ್ತಿರುವ ವೇಳೆ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಮಗು ಚರಂಡಿಗೆ ಬಿದ್ದ ಘಟನೆ ನಡೆದಿದೆ.ಜೆಸಿಬಿ ಮೂಲಕ ರಸ್ತೆ ಬದಿಯನ್ನು ಅಗೆದು ಕಾಮಗಾರಿ ನಡೆಸಲಾಗುತ್ತಿದ್ದು, ಈ ವೇಳೆ ಫುಟ್‌ಪಾತ್‌ನ ಚರಂಡಿ ಫ್ಲ್ಯಾಬ್‌ಗಳನ್ನು ತೆರವುಗೊಳಿಸಲಾಗಿತ್ತು. ಯಾವುದೇ ಮುನ್ನೆಚ್ಚರಿಕಾ ತಡೆಗೋಡೆ ಅಥವಾ ಸೂಕ್ತ ಎಚ್ಚರಿಕೆ ವ್ಯವಸ್ಥೆ ಇಲ್ಲದಿರುವ ಸಂದರ್ಭದಲ್ಲಿ, ಮನೆಯವರೊಂದಿಗೆ ನಡೆದುಕೊಂಡು ಬರುತ್ತಿದ್ದ ಮಗು ಕಾಮಗಾರಿ ನಡೆಯುತ್ತಿದ್ದ ಸ್ಥಳವನ್ನು ಗಮನಿಸುತ್ತಾ ಮುಂದೆ ಸಾಗಿತ್ತು.ಈ ವೇಳೆ ಫುಟ್‌ಪಾತ್‌ನಲ್ಲಿ ತೆರೆಯಲಾಗಿದ್ದ ಚರಂಡಿ ಕಾಣದೆ

ಸುಳ್ಯ : ಪುಟ್‌ಪಾತ್‌ ತೆರೆದು ಕಾಮಗಾರಿ, ಚರಂಡಿಗೆ ಬಿದ್ದ ಮಗು! Read More »

ಪೆರ್ನಾಜೆ : ಕಾಡಾನೆ ತೋಟಕ್ಕೆ ದಾಳಿ

ಜಾಲ್ಸೂರು ಸಮೀಪದ ಪೆರ್ನಾಜೆ ಪ್ರದೇಶದಲ್ಲಿ ಕಾಡಾನೆಯೊಂದು ತೋಟಗಳಿಗೆ ದಾಳಿ ನಡೆಸಿ ಬೆಳೆಗಳಿಗೆ ಹಾನಿ ಮಾಡಿರುವ ಅ.7ರಂದು ವರದಿಯಾಗಿದೆ.ಪೆರ್ನಾಜೆ ನಿವಾಸಿ ಕುಮಾರ್ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಸುಮಾರು 25 ಬಾಳೆಗಿಡಗಳು, 5 ಅಡಿಕೆ ಗಿಡಗಳು ಹಾಗೂ 5 ದೀಗುಜ್ಜೆ ಮರಗಳನ್ನು ನಾಶಪಡಿಸಿದೆ ಎನ್ನಲಾಗಿದೆ. ಕಾಡಾನೆ ತೋಟದಲ್ಲಿ ಸಂಚರಿಸಿ ಬೆಳೆಗಳನ್ನು ತುಳಿದು, ಮುರಿದು ಹಾನಿಗೊಳಿಸಿರುವುದರಿಂದ ಕೃಷಿಕರಿಗೆ ನಷ್ಟ ಉಂಟಾಗಿದೆ.ತೋಟದಲ್ಲಿ ಕಾಡಾನೆಯ ಹೆಜ್ಜೆ ಗುರುತುಗಳು ಹಾಗೂ ಹಾನಿಗೊಳಗಾದ ಬೆಳೆಗಳು ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಾಡಾನೆ ನೂಜಿಬೈಲ್ ಕಡೆಗೆ ತೆರಳಿರುವ

ಪೆರ್ನಾಜೆ : ಕಾಡಾನೆ ತೋಟಕ್ಕೆ ದಾಳಿ Read More »

ಸುಳ್ಯ ಬಿಜೆಪಿ ಮಂಡಲ ನೇತೃತ್ವದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಸಹಕಾರದಲ್ಲಿ ಬಂಟ್ಚಾಳಕ್ಕೆ ಶರವೂರಿನಿಂದ ಸೇವಾ ಜ್ಯೋತಿ

ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನ ಹಾಗೂ ಅಧಿಕಾರದ 25 ವರ್ಷಗಳ ಪಯಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಸೇವಾ ಜ್ಯೋತಿ’ ಅಭಿಯಾನದ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಜ್ಯೋತಿಯನ್ನು ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಸುಳ್ಯ ಬಿಜೆಪಿ ಮಂಡಲ ವತಿಯಿಂದ ಶಾಸಕರಾದ ಭಾಗೀರಥಿ ಮುರುಳ್ಯ ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಂಬೆಯವರ ನೇತೃತ್ವದಲ್ಲಿ ಬಂಟ್ವಾಳದತ್ತ ಕೊಂಡೊಯ್ಯಲಾಯಿತು.ಬಿಜೆಪಿ ವತಿಯಿಂದ ಬಂಟ್ವಾಳದ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ‘ಸೇವಾ ಜ್ಯೋತಿ’ ಅಭಿಯಾನದಡಿ ‘ಸೇವಾ ಸಂಕಲ್ಪ’ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು

ಸುಳ್ಯ ಬಿಜೆಪಿ ಮಂಡಲ ನೇತೃತ್ವದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಸಹಕಾರದಲ್ಲಿ ಬಂಟ್ಚಾಳಕ್ಕೆ ಶರವೂರಿನಿಂದ ಸೇವಾ ಜ್ಯೋತಿ Read More »

ಸುಳ್ಯ : ಬಸ್ ನಿಲ್ದಾಣವಿದ್ದರೂ ಬಸ್ ನಿಲ್ದಾಣದಲ್ಲಿ ನಿಲ್ಲದ ಬಸ್‌ಗಳು; ಕುಡುಕರ ಅಡ್ಡೆಯಾಗುತ್ತಿರುವ ರಥಬೀದಿ ಬಸ್ ನಿಲ್ದಾಣ

ಸುಳ್ಯ: ಪಟ್ಟಣದ ರಥಬೀದಿಯಲ್ಲಿರುವ ಬಿ.ಎಸ್.ಎನ್.ಎಲ್. ಗ್ರಾಹಕ ಸೇವಾ ಕೇಂದ್ರದ ಸಮೀಪದ ಬಸ್ ನಿಲ್ದಾಣವು ಕುಡುಕರ ವಿಶ್ರಾಂತಿ ತಾಣವಾಗಿ ಪರಿವರ್ತನೆಯಾಗುತ್ತಿದೆ‌.ಇಲ್ಲಿ ಬಸ್ ನಿಲ್ದಾಣ ಇದ್ದರೂ ಬಸ್‌ಗಳನ್ನು ನಿಲ್ಲಿಸದೆ, ಸುಮಾರು 100 ಮೀಟರ್ ಕೆಳಭಾಗದಲ್ಲಿ ಬಸ್ ಗಳನ್ನು ನಿಲ್ಲಿಸಲಾಗುತ್ತಿದೆ‌.ನಿಲ್ದಾಣದಲ್ಲಿ ಬಸ್‌ಗಳು ನಿಲ್ಲದೆ ಕೆಳಭಾಗದಲ್ಲಿ ನಿಲ್ಲಿಸುವುದರಿಂದ, ವಿಶೇಷವಾಗಿ ಶಾಲಾ-ಕಾಲೇಜುಗಳು ಬಿಡುವ ಹಾಗೂ ಆರಂಭವಾಗುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಚರಿಸುವ ಸಂದರ್ಭ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬಸ್‌ಗಳಿಗಾಗಿ ಪ್ರಯಾಣಿಕರು ರಸ್ತೆಯಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರಿಗೂ ಸಂಚಾರದಟ್ಟಣೆ

ಸುಳ್ಯ : ಬಸ್ ನಿಲ್ದಾಣವಿದ್ದರೂ ಬಸ್ ನಿಲ್ದಾಣದಲ್ಲಿ ನಿಲ್ಲದ ಬಸ್‌ಗಳು; ಕುಡುಕರ ಅಡ್ಡೆಯಾಗುತ್ತಿರುವ ರಥಬೀದಿ ಬಸ್ ನಿಲ್ದಾಣ Read More »

“ಹುಡುಗಿಯ ಹೃದಯ ಗೆಲ್ಲುವುದು ರೂಪದಿಂದಲ್ಲ… ಗುಣದಿಂದ!”

✍️*ಶರಣ್ಯ ಗೌಡ*“ಹುಡುಗಿಯ ಹೃದಯ ಗೆಲ್ಲಲು ಗಂಡಸಿಗೆ ಏನು ಬೇಕು ಗೊತ್ತಾ? ಹಣವಲ್ಲ… ಸೌಂದರ್ಯವಲ್ಲ… ದೊಡ್ಡ ದೊಡ್ಡ ಮಾತುಗಳೂ ಅಲ್ಲ. ಅವಳ ಕಣ್ಣಲ್ಲಿ ಕಣ್ಣೀರು ಬಂದಾಗ, ‘ನಾನು ಇದ್ದೇನೆ’ ಎಂದು ಹೇಳುವ ಒಂದು ನಿಜವಾದ ಹೃದಯ.”ಬಹುಶಃ ಇದೇ ಕಾರಣಕ್ಕೆ ಕೆಲವು ಗಂಡಸರು ನೋಡಲು ಸಾಮಾನ್ಯವಾಗಿದ್ದರೂ, ಹುಡುಗಿಯ ಮನಸ್ಸಿನಲ್ಲಿ ಮಾತ್ರ ಅಸಾಮಾನ್ಯ ಸ್ಥಾನ ಪಡೆದುಕೊಳ್ಳುತ್ತಾರೆ.ಹುಡುಗಿಯೊಬ್ಬಳ ಮನಸ್ಸನ್ನು ಗೆಲ್ಲಲು ದೊಡ್ಡ ದೊಡ್ಡ ಮಾತುಗಳ ಅಗತ್ಯವಿಲ್ಲ. ದುಬಾರಿ ಉಡುಗೊರೆಗಳೂ ಬೇಕಾಗಿಲ್ಲ. ಅವಳ ಹಿಂದೆ ನೂರಾರು ಜನ ಓಡಾಡಬೇಕು ಎಂಬ ಆಸೆಯೂ ಅವಳಿಗಿರುವುದಿಲ್ಲ. ಅವಳಿಗೆ

“ಹುಡುಗಿಯ ಹೃದಯ ಗೆಲ್ಲುವುದು ರೂಪದಿಂದಲ್ಲ… ಗುಣದಿಂದ!” Read More »

ಅಮೆಮನೆ ಉತ್ತಯ್ಯ ಅವರ ಧರ್ಮಪತ್ನಿ ದಮಯಂತಿ ನಿಧನ

ತೊಡಿಕಾನ: ಅಮೆಮನೆ ಉತ್ತಯ್ಯ ಅವರ ಧರ್ಮಪತ್ನಿ ದಮಯಂತಿ (70) ಅ.6ರಂದ ನಿಧನರಾಗಿದ್ದಾರೆ.ಮೃತರು ಪತಿ ಉತ್ತಯ್ಯ, ಪುತ್ರಿಯರಾದ ಕವಿತಾ, ಮನೋಜ್ ಹಾಗೂ ಯತೀಶ ಸೇರಿದಂತೆ ಕುಟುಂಬಸ್ಥರು ಹಾಗೂ ಬಂಧುಬಳಗದವರನ್ನು ಅಗಲಿದ್ದಾರೆ.ಅಮೆಮನೆ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಬಂಧುಬಳಗದವರ ಶೋಕದ ನಡುವೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದುಬಂದಿದೆ.ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ದೇವರು ನೀಡಲಿ ಎಂದು ಬಂಧುಗಳು ಹಾಗೂ ಹಿತೈಷಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಮೆಮನೆ ಉತ್ತಯ್ಯ ಅವರ ಧರ್ಮಪತ್ನಿ ದಮಯಂತಿ ನಿಧನ Read More »

error: Content is protected !!
Scroll to Top