ಪೆರ್ನಾಜೆ : ಕಾಡಾನೆ ತೋಟಕ್ಕೆ ದಾಳಿ

ಜಾಲ್ಸೂರು ಸಮೀಪದ ಪೆರ್ನಾಜೆ ಪ್ರದೇಶದಲ್ಲಿ ಕಾಡಾನೆಯೊಂದು ತೋಟಗಳಿಗೆ ದಾಳಿ ನಡೆಸಿ ಬೆಳೆಗಳಿಗೆ ಹಾನಿ ಮಾಡಿರುವ ಅ.7ರಂದು ವರದಿಯಾಗಿದೆ.
ಪೆರ್ನಾಜೆ ನಿವಾಸಿ ಕುಮಾರ್ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಸುಮಾರು 25 ಬಾಳೆಗಿಡಗಳು, 5 ಅಡಿಕೆ ಗಿಡಗಳು ಹಾಗೂ 5 ದೀಗುಜ್ಜೆ ಮರಗಳನ್ನು ನಾಶಪಡಿಸಿದೆ ಎನ್ನಲಾಗಿದೆ. ಕಾಡಾನೆ ತೋಟದಲ್ಲಿ ಸಂಚರಿಸಿ ಬೆಳೆಗಳನ್ನು ತುಳಿದು, ಮುರಿದು ಹಾನಿಗೊಳಿಸಿರುವುದರಿಂದ ಕೃಷಿಕರಿಗೆ ನಷ್ಟ ಉಂಟಾಗಿದೆ.
ತೋಟದಲ್ಲಿ ಕಾಡಾನೆಯ ಹೆಜ್ಜೆ ಗುರುತುಗಳು ಹಾಗೂ ಹಾನಿಗೊಳಗಾದ ಬೆಳೆಗಳು ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಾಡಾನೆ ನೂಜಿಬೈಲ್ ಕಡೆಗೆ ತೆರಳಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾಡಾನೆಗಳ ನಿರಂತರ ಸಂಚಾರದಿಂದ ಕೃಷಿಕರು ಆತಂಕದಲ್ಲಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ















Leave a Comment

Your email address will not be published. Required fields are marked *

error: Content is protected !!
Scroll to Top