ಸುಳ್ಯ: ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ಐವರ್ನಾಡು ಗ್ರಾಮದ ಉದ್ದಂಪಾಡಿ ನಿವಾಸಿ ಕರುಣಾಕರ ಅವರು ಅ.6ರಂದು ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಸರಸ್ವತಿ, ಪತ್ನಿ ಅಶ್ವಿನಿ ಎಂ., ಪುತ್ರರಾದ ಸಚಿನ್, ಚೇತನ್ ಹಾಗೂ ಪ್ರತೀಕ್, ಸಹೋದರಿ, ಸಹೋದರರು ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಬಳಗ ಹಾಗೂ ಪರಿಚಿತರಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕರುಣಾಕರ ನಿಧನ











