ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನ ಹಾಗೂ ಅಧಿಕಾರದ 25 ವರ್ಷಗಳ ಪಯಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಸೇವಾ ಜ್ಯೋತಿ’ ಅಭಿಯಾನದ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಜ್ಯೋತಿಯನ್ನು ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಸುಳ್ಯ ಬಿಜೆಪಿ ಮಂಡಲ ವತಿಯಿಂದ ಶಾಸಕರಾದ ಭಾಗೀರಥಿ ಮುರುಳ್ಯ ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಂಬೆಯವರ ನೇತೃತ್ವದಲ್ಲಿ ಬಂಟ್ವಾಳದತ್ತ ಕೊಂಡೊಯ್ಯಲಾಯಿತು.
ಬಿಜೆಪಿ ವತಿಯಿಂದ ಬಂಟ್ವಾಳದ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ‘ಸೇವಾ ಜ್ಯೋತಿ’ ಅಭಿಯಾನದಡಿ ‘ಸೇವಾ ಸಂಕಲ್ಪ’ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ಬಿಜೆಪಿ ಕಾರ್ಯಕರ್ತರು ತೆರಳಿದರು.
ಸುಳ್ಯ, ಬೆಳ್ಳಾರೆ, ಸವಣೂರು, ಕುದ್ಮಾರು ಸೇರಿದಂತೆ ಕ್ಷೇತ್ರದ ವಿವಿಧ ಪ್ರದೇಶಗಳಿಂದ ಆಗಮಿಸಿದ ಕಾರ್ಯಕರ್ತರು ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ಒಟ್ಟು ಸೇರಿದರು. ಬಳಿಕ ವಿವಿಧ ವಾಹನಗಳಲ್ಲಿ ಸೇವಾ ಜ್ಯೋತಿಯೊಂದಿಗೆ ಬಂಟ್ವಾಳದತ್ತ ಪ್ರಯಾಣ ಬೆಳೆಸಿದರು.
ಬಂಟರ ಭವನದಲ್ಲಿ ನಡೆದ ‘ಸೇವಾ ಸಂಕಲ್ಪ’ ಸಮಾವೇಶದಲ್ಲಿ ಕಾರ್ಯಕರ್ತರು ಭಾಗವಹಿಸಿ ಪಕ್ಷದ ಸಂಘಟನೆ, ಸೇವಾ ಚಟುವಟಿಕೆಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸುಳ್ಯ ಬಿಜೆಪಿ ಮಂಡಲ ನೇತೃತ್ವದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಸಹಕಾರದಲ್ಲಿ ಬಂಟ್ಚಾಳಕ್ಕೆ ಶರವೂರಿನಿಂದ ಸೇವಾ ಜ್ಯೋತಿ











