ಸುಳ್ಯ: ಅ.12: ಅರಂತೋಡು ಸಮೀಪದ ಕೊಡಂಕೇರಿ ಬಳಿ ಅ.12ರಂದು ಕಾರೊಂದು ಅಪಘಾತಕ್ಕೀಡಾಗಿ ಜಖಂಗೊಂಡಿದ್ದು, ಮಹಿಳೆಯೊಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.
ಗಾಯಗೊಂಡ ಮಹಿಳೆಯನ್ನು ರೇಖಾ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಅವರ ಪತಿ ಬಿದ್ದಪ್ಪ ಹಾಗೂ ಮಗಳು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಾಯಗೊಂಡ ರೇಖಾ ಅವರನ್ನು ಅರಂತೋಡಿನ ಸಮೃದ್ಧಿ ಆಂಬ್ಯುಲೆನ್ಸ್‌ನ ಶರತ್ ಅಡ್ಯಡ್ಕ ಅವರು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಕಾರು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅರಂತೋಡು ಕೊಡಂಕೇರಿ ಸಮೀಪ ಕಾರು ಅಪಘಾತ: ಮಹಿಳೆಗೆ ಗಾಯ













