ಸುಳ್ಯ, ಅ.12: ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ (ರಿ.) ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್. ಸಂಶುದ್ದೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಂಯೋಜಕ ಎನ್. ಜಯಪ್ರಕಾಶ್ ರೈ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಅಸೋಸಿಯೇಷನ್‌ನ ನಿಕಟಪೂರ್ವ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅವರು ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ, ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಕುಡೇಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್ ಕೆ.ಎಸ್. ಹಾಗೂ ಖಜಾಂಚಿಯಾಗಿ ಅಬ್ದುಲ್ ರಜಾಕ್ (ರಜ್ಜು ಭಯ್ಯ) ಅಧಿಕಾರ ಸ್ವೀಕರಿಸಿದರು.
ನೂತನ ಪದಾಧಿಕಾರಿಗಳ ವಿವರ
ಗೌರವ ಅಧ್ಯಕ್ಷರು: ದೊಡ್ಡಣ್ಣ ಬರೆಮೇಲು
ಅಧ್ಯಕ್ಷರು: ಜಯಪ್ರಕಾಶ್ ಕುಡೇಕಲ್ಲು
ಪ್ರಧಾನ ಕಾರ್ಯದರ್ಶಿ: ಸುದರ್ಶನ್ ಕೆ.ಎಸ್.
ಖಜಾಂಚಿ: ಅಬ್ದುಲ್ ರಜಾಕ್ (ರಜ್ಜು ಭಯ್ಯ)
ಉಪಾಧ್ಯಕ್ಷರು: ಶರತ್ ಅಡ್ಕಾರ್, ಶಾಫಿ ಕುತ್ತಮೊಟ್ಟೆ, ಹರಿಪ್ರಕಾಶ್ ಅಡ್ಕಾರ್ ಹಾಗೂ ಕೆ.ಬಿ. ಇಬ್ರಾಹಿಂ.
ಕಾರ್ಯದರ್ಶಿಗಳು: ಕನ್ನದಾಸ್ ಹಾಗೂ ಶಹಿದ್ ಪಾರೆ.
ಸಂಘಟನಾ ಕಾರ್ಯದರ್ಶಿ: ಇರ್ಫಾನ್ ಜನತಾ.
ರೆಫ್ರಿ ಬೋರ್ಡ್ ಸಂಚಾಲಕರು: ಅನಿಲ್ ನಾಲ್ಕೂರು.
ತಾಂತ್ರಿಕ ಮಂಡಳಿ: ಮನೋಜ್ ಉಬರಡ್ಕ (NIS).
ನಿರ್ದೇಶಕರ ಮಂಡಳಿ
ಬಾಲಗೋಪಾಲ್ ಎಂ., ಸತೀಶ್ ಕುಮಾರ್ ಕೆ.ಆರ್., ಮೂಸಾ ಕುಂಞಿ ಪೈಂಬೆಚಾಲ್, ರಿಯಾಝ್ ಕಟ್ಟೇಕಾರ್, ಚಂದ್ರ ಕೊಲ್ಚಾರ್, ಪ್ರಭಾಕರ್ ನಾಯರ್, ರಾಜು ಪಂಡಿತ್, ಉಮೇಶ್ ಪಿ., ಕೊರಗಪ್ಪ ಬೆಳ್ಳಾರೆ, ಬಶೀರ್ ಸಪ್ನ, ರವಿರಾಜ್ ಎನ್., ತೀರ್ಥವರ್ಣ ಬಳ್ಳಡ್ಕ, ಅಶ್ರಫ್ ಗುಂಡಿ, ನಿತೀನ್ ಗೂನಡ್ಕ, ರಂಜಿತ್ ಎನ್.ಆರ್., ರಿಜ್ವಾನ್ ಜನತಾ, ರಾಜೀವಿ ರೈ, ಗೋಪಾಲಕೃಷ್ಣ ಆರ್. ಹಾಗೂ ಮಂಜುನಾಥ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರು
ಎನ್. ಜಯಪ್ರಕಾಶ್ ರೈ, ಎಸ್. ಸಂಶುದ್ದೀನ್, ಇಬ್ರಾಹಿಂ ಗೂನಡ್ಕ, ಗೋಕುಲ ದಾಸ್, ಕೆ.ಎಂ. ಮುಸ್ತಫಾ ಹಾಗೂ ಹರೀಶ್ ರೈ ಉಬರಡ್ಕ ಗೌರವ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ಶಶಿಧರ್ ಎಂ.ಜೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್‌ಗೆ ನೂತನ ಪದಾಧಿಕಾರಿಗಳ ಪದಗ್ರಹಣ













