ಮಹಿಳಾ ಕಿಸಾನ್ ದಿವಸ್: ಉತ್ತಮ ಕೃಷಿ ಮಹಿಳೆಯಾಗಿ ಲೀಲಾವತಿ ರುಕ್ಮಯ ದಾಸ್ ಆಯ್ಕೆ

ಸುಳ್ಯ: ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅಕ್ಟೋಬರ್ 15ರಂದು ನಡೆಯಲಿರುವ ‘ಮಹಿಳಾ ಕಿಸಾನ್ ದಿವಸ್’ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಶ್ರೀಮತಿ ಲೀಲಾವತಿ ರುಕ್ಮಯ ದಾಸ್ ಅವರು ಉತ್ತಮ ಕೃಷಿ ಮಹಿಳೆಯಾಗಿ ಸನ್ಮಾನ ಸ್ವೀಕರಿಸಲಿದ್ದಾರೆ.

















ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಮತ್ತು ಸಾಧನೆಯನ್ನು ಗುರುತಿಸಿ ಗೌರವಿಸುವ ಈ ಕಾರ್ಯಕ್ರಮದಲ್ಲಿ ಲೀಲಾವತಿ ಅವರು ಸನ್ಮಾನಕ್ಕೆ ಆಯ್ಕೆಯಾಗಿರುವುದು ಸುಳ್ಯ ತಾಲೂಕು ಹಾಗೂ ಸಂಪಾಜೆ ಗ್ರಾಮದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪರಿಶ್ರಮ, ಬದ್ಧತೆ ಹಾಗೂ ಸಾಧನೆಗೆ ದೊರಕಿರುವ ಈ ಗೌರವವು ಇತರ ಕೃಷಿ ಮಹಿಳೆಯರಿಗೂ ಪ್ರೇರಣೆಯಾಗಲಿದೆ. ಸಂಪಾಜೆ ಗ್ರಾಮದ ಕೃಷಿ ಮಹಿಳೆಯೊಬ್ಬರು ತಾಲೂಕಿಗೆ ಗೌರವ ತಂದುಕೊಟ್ಟಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top