ಸುಳ್ಯ ಮೆಸ್ಕಾಂ ವ್ಯಾಪ್ತಿಯ ಅರಂತೋಡು ವಲಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅರಂತೋಡು ವಲಯದ ಪವರ್ ಮೆನ್ ಗಳು ವರ್ಗಾವಣೆಗೊಂಡಿದ್ದು, ಹೊಸದಾಗಿ ಯಾವುದೇ ಪವರ್ ಮೆನ್ ಗಳು ನೇಮಕಗೊಂಡಿರುವುದಿಲ್ಲ. ಈಗಾಗಲೇ ಗ್ರಾಮೀಣ ಪ್ರದೇಶವಾದ ಸಂಪಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು, ಮರ್ಕಂಜ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿದ್ದು, ಈ ಸಮಸ್ಯೆಗೆ ಸಂಬಂಧಪಟ್ಟ ಇಲಾಖೆಯವರು ಅ.26ರ ಒಳಗೆ ಸ್ಪಂದಿಸದಿದ್ದಲ್ಲಿ ಅ. 27 ರಂದು ಸುಳ್ಯ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ ಕೆ ಹಮೀದ್ ರವರು ಪತ್ರಿಕಾ ಪ್ರಕಟಣೆಯನ್ನು ನೀಡಿದ್ದಾರೆ. ಅಲ್ಲದೆ ಕಾರ್ಯಪಾಲಕ ಇಂಜಿನಿಯರ್ ಮೆಸ್ಕಾಂ ಪುತ್ತೂರು ಮತ್ತು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಿಗೆ ಪ್ರತಿಭಟನೆಗೆ ಅನುಮತಿ ಕೋರಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಅರಂತೋಡು : ಪವರ್ ಮ್ಯಾನ್ ಗಳನ್ನು ನೇಮಕ ಮಾಡದಿದ್ದರೆ ಸುಳ್ಯ ಮೆಸ್ಕಾಂ ಕಚೇರಿ ಮುತ್ತಿಗೆ












