ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಸಲ್ಲಿಸಿದ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ನಾಯಕತ್ವವನ್ನು ಬಿಂಬಿಸುವ ಉದ್ದೇಶದಿಂದ “ವಿಶ್ವ ನಾಯಕ ನರೇಂದ್ರ ಮೋದಿ ನಾಟಕವನ್ನು ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಸುಳ್ಯ ಬಿಜೆಪಿ ಮಂಡಲದ ಆಯೋಜಿಸಿ ಯಶಸ್ವಿ ಪ್ರದರ್ಶನ ನೀಡಲಾಗಿದ್ದು ಇದರ ಸಮರೋಪ ಸಮಾರಂಭ ಸುಳ್ಯದ ಮಿಲಿಟ್ರಿ ಗ್ರೌಂಡ್ ನಲ್ಲಿ ಅ.27ರಂದು ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಸಮರೋಪ ಭಾಷಣ ಮಾಡಿದರು.
ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ,ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ,ಸುಳ್ಯ ಮಹಾಶ ಕ್ತಿಕೇಂದ್ರ ಅಧ್ಯಕ್ಷ ಎ.ಟಿ.ಕುಸುಮಾಮಧರ,ಶಕ್ತಿಕೇಂದ್ರ ಪ್ರಮುಖ್ ರಮೇಶ ಇರಂತಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸುಳ್ಯ ಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಜಯನಗರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಚಾಗತಿಸಿದರು.
ಬೀದಿ ನಾಟಕ ಕಲಾವಿದರನ್ನು ಸಹಕಾರ ನೀಡಿದವರನ್ನು ಶಾಸಕರು ಗೌರವಿಸಿದರು.
ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಅವರು ಕೈಗೊಂಡಿರುವ ಕಾರ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಬೀದಿ ನಾಟಕ ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಭಾಗಗಳಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರದರ್ಶನ ವೀಕ್ಷಿಸಿದರು.
ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ಕುಸುಮಧಾರ ಎ.ಟಿ. ಅವರು ನಾಟಕದ ರಚನೆ ಮತ್ತು ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದರು. ರಾಜ್ ಮುಖೇಶ್ ಸುಳ್ಯ ಅವರು ರಂಗ ಸಂಯೋಜನೆ ಮಾಡಿದ್ದು, ಪ್ರದೀಪ್ ರೈ ಮನವಳಿಕೆ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಕಲಾವಿದರು
ಕುಸುಮಧಾರ ಎ.ಟಿ., ರಾಜ್ ಮುಖೇಶ್, ಪುಷ್ಪರಾಜ್ ಏನೇಕಲ್ಲು, ಕೇಶವ ಮಾಸ್ಟರ್, ನಾರಾಯಣ ಎಸ್.ಎಂ., ಚಿದಾನಂದ ವಿದ್ಯಾನಗರ, ದುಷ್ಯಂತ್ ಕಂಜಿಪಿಲಿ ಹಾಗೂ ಚಿನ್ಮಯ್ ಅವರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ನಾಟಕಕ್ಕೆ ಜೀವ ತುಂಬಿದರು. ವಿವಿಧ ಶಕ್ತಿ ಕೇಂದ್ರಗಳಲ್ಲಿ ಪ್ರದರ್ಶನ ನೀಡಿದ ಕಲಾವಿದರ ತಂಡವು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು
25 ವರ್ಷಗಳ ಸಾರ್ವಜನಿಕ ಸೇವೆ, ನಾಯಕತ್ವದ ಅನಾವರಣ: ‘ವಿಶ್ವ ನಾಯಕ ನರೇಂದ್ರ ಮೋದಿ’ ನಾಟಕಕ್ಕೆ ತೆರೆ














