ಅರಂತೋಡು: ಅರಂತೋಡು ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ಪವರ್ಮ್ಯಾನ್ಗಳ ಕೊರತೆಯಿಂದ ಸಾರ್ವಜನಿಕರಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ, ಅರಂತೋಡು ಮತ್ತು ತೊಡಿಕಾನ ಕಾಂಗ್ರೆಸ್ ಗ್ರಾಮ ಸಮಿತಿಗಳ ವತಿಯಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮೆಸ್ಕಾಂ ವ್ಯಾಪ್ತಿಯಲ್ಲಿ ಖಾಲಿ ಇರುವ ಪವರ್ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಿ, ವಿದ್ಯುತ್ ಸೇವೆಯನ್ನು ಸುಗಮಗೊಳಿಸಬೇಕು. ಅಲ್ಲದೆ, ರಾತ್ರಿ ವೇಳೆಯಲ್ಲಿಯೂ ಪವರ್ಮ್ಯಾನ್ಗಳನ್ನು ಕರ್ತವ್ಯಕ್ಕೆ ನಿಯೋಜಿಸುವ ಮೂಲಕ ತುರ್ತು ವಿದ್ಯುತ್ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅರಂತೋಡು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ, ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ಪದಾಧಿಕಾರಿಗಳಾದ ಜುಬೇರ್ ಅರಂತೋಡು, ರವೀಂದ್ರ ಪೂಜಾರಿ ತೊಡಿಕಾನ, ಸೂರ್ಯಪ್ರಕಾಶ್ ಪೆತ್ತಾಜೆ, ವೆಂಕಟ್ರಮಣ ಮೇರ್ಕಜೆ ಅರಂತೋಡು, ಅಬೂಬಕರ್ ಪಾರೆಕಲ್ಲು, ತಾಜುದ್ದೀನ್ ಅರಂತೋಡು, ಹರ್ಷಿತ್ ಕೊಡಂಕೇರಿ, ಮುಸ್ತಾಪ ಅರಂತೋಡು, ಯತೀಶ್ ಬಾಜಿನಡ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.














