ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು, ಇಲ್ಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ.ವರದ ರಾಜ್ ಚಂದ್ರಗಿರಿ, ಸಂಚಾಲಕರಾಗಿ ಎ ಮೋಹನ್ ಜವಬ್ದಾರಿ ಸ್ವೀಕರಿಸಿದರು.
ಕೋಶಾಧಿಕಾರಿಗಳಾಗಿ ಸುಕುಮಾರ್ ರಾವ್ ಎನ್.ಎಸ್. ಹಾಗೂ ಸದಸ್ಯರುಗಳಾಗಿ ಯಶೋಧರ ಜೈನ್, ಎಸ್ ರಾಜಶೇಖರ್, ವೇಣುಗೋಪಾಲ ಭಟ್ ಎಂ, ಶ್ರೀಮತಿ ಪೂರ್ಣ ಮಂಗಳ, ಶ್ರೀಮತಿ ಮಾಲಿನಿ ಕಶ್ಯಪ್, ರಂಜಿತ್ ಜೈನ್ ಇವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೃಷ್ಣ ಕುಮಾರ್ ಶೆಟ್ಟಿ ಕಡಬ ದೀಪ ಪ್ರದಾನ ಮಾಡುವ ಮೂಲಕ ಜವಬ್ದಾರಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ, ಹಾಗೂ ಕಾಲೇಜಿನ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ ಎನ್, ಕಾಲೇಜಿನ ಪ್ರಾರ್ಚಾಯ ಶ್ರೀಕೃಷ್ಣ ಗಣರಾಜ ಭಟ್ ಎಸ್ ಹಾಗೂ ವಿಭಾಗದ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ಪುತ್ತೂರಿನ ವಿವೇಕಾನಂದ ಸ್ವಾಯತ್ತ ಪದವಿ ಕಾಲೇಜಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ. ವರದರಾಜ ಚಂದ್ರಗಿರಿ ಜವಬ್ದಾರಿ ಸ್ವೀಕಾರ.















