ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪವನ್ ಪಲ್ಲತ್ತಡ್ಕ ಅವರನ್ನು ಪಂಜದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬಳಿಯಿಂದ ಪವನ್ ಪಲ್ಲತ್ತಡ್ಕ ಅವರನ್ನು ತೆರೆದ ವಾಹನದಲ್ಲಿ ಕರೆದೊಯ್ಯಲಾಯಿತು. ನಾಸಿಕ್ ಬ್ಯಾಂಡ್ನೊಂದಿಗೆ ಆರಂಭಗೊಂಡ ಮೆರವಣಿಗೆಯು ಪಂಜ ಮುಖ್ಯ ಪೇಟೆಯವರೆಗೆ ಸಾಗಿತು. ಈ ಸಂದರ್ಭದಲ್ಲಿ ಪಂಜ ಪರಿಸರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಪವನ್ ಪಲ್ಲತ್ತಡ್ಕ ಅವರ ಹಿತೈಷಿಗಳು ಭಾಗವಹಿಸಿ ಅಭಿನಂದನೆ ಸಲ್ಲಿಸಿದರು.
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು, ಜೇಸಿಐ ಪಂಜ ಪಂಚಶ್ರೀ, ಲಯನ್ಸ್ ಕ್ಲಬ್ ಪಂಜ, ಉಳ್ಳಾಕುಲು ಕಲಾರಂಗ ಪಲ್ಲೋಡಿ, ಕೃಪಾ ಯುವತಿ ಮಂಡಲ ಚಿಂಗಾಣಿಗುಡ್ಡೆ, ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ ಹಾಗೂ ಶಿಲ್ಪಾ ಯುವತಿ ಮಂಡಲ ಕೂತ್ಕುಂಜದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಜಾಕೆ ಸ್ವಾಗತಿಸಿ ನಿರೂಪಿಸಿದರು.
















