ದೇವರಕೊಲ್ಲಿ ಸಮೀಪ ಕಾರು ಅಪಘಾತ: ಸಾವನ್ನಪ್ಪಿದ ಯುವಕ ಬೆಂಗಳೂರಿನ ದೀಕ್ಷಿತ್

ಸುಳ್ಯ : ದೇವರಕೊಲ್ಲಿ ಸಮೀಪದ ಗಾರೆಮುರಿ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಯುವಕನೋರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ನ. 23ರಂದು ವರದಿಯಾಗಿದೆ.









































































ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಬೆಂಗಳೂರಿನ ನಾಗದೇವನ ಹಳ್ಳಿ ಪ್ರಸನ್ನ ಅವರ ಪುತ್ರ ದೀಕ್ಷಿತ್ (22) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಪ್ರಜ್ವಲ್ ಆರ್. (22) ಹಾಗೂ ಪ್ರಜ್ವಲ್ ಆರ್. (23) ಎಂದು ಗುರುತಿಸಲಾಗಿದೆ. ಗಾಯಾಳುಗಳಿಬ್ಬರೂ ಒಂದೇ ಹೆಸರಿನವರಾಗಿದ್ದಾರೆ.

ಮೂವರೂ ಬೆಂಗಳೂರಿನ ಮೂಲದವರಾಗಿದ್ದು, ಮಡಿಕೇರಿಯಲ್ಲಿ ನಡೆಯುತ್ತಿದ್ದ ಕ್ರೀಡಾ ಪಂದ್ಯಾಟದಲ್ಲಿ ಭಾಗವಹಿಸಿ ಅಲ್ಲಿಂದ ಧರ್ಮಸ್ಥಳಕ್ಕೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.ಗೆಳೆಯರ ಇನ್ನೊಂದು ಗುಂಪು ತಾರ್ ಜೀಪಿನಲ್ಲಿ ತೆರಳುತ್ತಿತ್ತು.

ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top