ಸಂಪಾಜೆ ಗ್ರಾಮದ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ಮಾ.14ರಂದು ಕೊಳ್ಳಿ ಮೂಹೂರ್ತ ನಡೆಯಿತು. ಒತ್ತೆಕೋಲ ಮಾ. 28 ರಿಂದ 30 ರವರೆಗೆ ನಡೆಯಲಿದೆ.
ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವಕ್ಕೆ ವಿಶೇಷ ಪೂಜೆಯನ್ನು ಮಾಡಿ ಬಳಿಕ ಕೆ. ಬಿ ಕೇಶವ ಆಚಾರ್ಯ ಕೀಲಾರು ಬೈಲು ಮುಹೂರ್ತದ ಕೊಳ್ಳಿಯನ್ನು ಕಡಿದರು.
ಬಳಿಕ ವಾದ್ಯ ಘೋಷದೊಂದಿಗೆ ಒತ್ತೆಕೋಲ ಗದ್ದೆಗೆ ಸಾಗಿ ಬರಲಾಯಿತು. ಬಳಿಕ ಗದ್ದೆಯ ವಿಷ್ಣುಮೂರ್ತಿ ಕಟ್ಟೆಗೆ ವಿಶೇಷ ಪೂಜೆ ಪ್ರಾರ್ಥನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಒತ್ತೆಕೋಲ ಉತ್ಸವ ಸಮಿತಿಯ ಗೌರವಾಧ್ಯಕ್ಷ. ರಾಜಾರಾಮ ಕೀಲಾರು, ಅಧ್ಯಕ್ಷ ಕೆ. ಆರ್ ಜಗದೀಶ್ ರೈ, ಮೊಕೇಸರರು ಕೆ. ಕರುಣಾಕರ, ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಕೋಶಾಧಿಕಾರಿ / ಖಜಾಂಜಿ ಬಿ.ಆರ್. ಪದ್ಮಯ್ಯ, ಗೌರವ ಸಲಹೆಗಾರರು ಶ್ರೀಧರ ಮಾದೇಪಾಲು ಇತರರು ಉಪಸ್ಥಿತರಿದ್ದರು.
ಕಲ್ಲುಗುಂಡಿ : ಒತ್ತೆಕೋಲಕ್ಕೆ ಕೊಳ್ಳಿ ಮೂಹೂರ್ತ


















