ಶಾಲಾ ಆವರಣದೊಳಗೆ ನುಗ್ಗಿ ಕೃಷಿ ನಾಶ ಮಾಡಿದ ಕಾಡಾನೆಗಳ ಹಿಂಡು

ಎರಡು ವರ್ಷಗಳ ಹಿಂದೆ ಕಾಡಾನೆಯೊಂದು ರೈತನನೋರರ್ವರನ್ನು ಕೊಂದು ಹಾಕಿದ ಚೆಂಬು ಗ್ರಾಮದ ಡಬ್ಬಡ್ಕ ಪರಿಸರದಲ್ಲಿ ಕಾಡಾನೆಗಳ ಸಮಸ್ಯೆ ಹೆಚ್ಚುತ್ತಿದ್ದು ಜು.27ರಂದು ಮುಂಜಾನೆ ದಬ್ಬಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಒಳಗೆ ನುಗ್ಗಿದ ಕಾಡಾನೆ ಹಿಂಡು ನುಗ್ಗಿ ಶಾಲಾ ಕೃಷಿಯನ್ನು ನಾಶ ಮಾಡಿದ ಘಟನೆ ವರದಿಯಾಗಿದೆ.
ಡಬ್ಬಡ್ಕ ಶಾಲಾ ಆವರಣಕ್ಕೆ ನುಗ್ಗಿದ ಕಾಡಾನೆ ಹಿಂಡು ಶಾಲೆಯ ಆವರಣದಲ್ಲಿರುವ ಬಾಳೆ ಗಿಡ, ತೆಂಗಿನ ಗಿಡ ಸೇರಿದಂತೆ ಕೃಷಿಯನ್ನು ಸಂಪೂರ್ಣ ಧ್ವಂಸ ಮಾಡಿದೆ.ಅಲ್ಲದೆ ಕೆದಂಬಾಡಿ, ಕಾಂತಬೈಲು ಸೇರಿದಂತೆ ಇತರ ಭಾಗಗಳ ಕೃಷಿಕರ ತೋಟಕ್ಕೆ ನುಗ್ಗಿ ವಿಪರೀತ ಕೃಷಿಯನ್ನು ನಾಶಪಡಿಸಿದೆ.
ಇದರಿಂದ ಕೃಷಿಕರು ಸೇರಿದಂತೆ ಗ್ರಾಮಸ್ಥರು ಆರ್ಥಿಕ ನಷ್ಟಕ್ಕೆಒಳಗಾಗಿದ್ದಾರೆ.
ಸಾರ್ವಜನಿಕರು ಸಂಚರಿಸುವಾಗ ಭಯ ಪಟ್ಟುಕೊಂಡು ಸಂಚಾರಿಸುತ್ತಿದ್ದಾ .ಆದಷ್ಟು ಬೇಗನೆ ಅರಣ್ಯಾಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಂಡು ಆನೆ ದಾಳಿಯಿಂದ ಗ್ರಾಮಸ್ಥರ ರಕ್ಷಣೆ ಹಾಗೂ ಹಾನಿಗೊಳಗಾದ ಕೃಷಿಕರಿಗೆ ಪರಿಹಾರ ಹೆಚ್ಚಳ ಮಾಡಿ ನ್ಯಾಯ ಒದಗಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.



































































































































Leave a Comment

Your email address will not be published. Required fields are marked *

error: Content is protected !!
Scroll to Top