ಮಂಡೆಕೋಲು ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆ

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ವೈತ್ ಹುಂಡೈ ಸುಳ್ಯ ಶಾಖಾ ಮೆನೇಜರ್ ಸುಮನಾ ಬೆಳ್ಳಾರ್ಕರ್ ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಾಹಿತಿಗಳಾದ ವಿಮಲಾರುಣ ಪಡ್ಡಂಬೈಲು ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯ ಒಳಿತು ಕೆಡುಕುಗಳ ಬಗ್ಗೆ ಮಾತನಾಡಿದರು. ಗ್ರಂಥಾಲಯದ ಸ್ಪೋಕನ್‌ ಇಂಗ್ಲಿಷ್ ಶಿಕ್ಷಕಿ ಗೀತಾಂಜಲಿ ಟಿ.ಜಿ ಅಧ್ಯಕ್ಷತೆ ವಹಿಸಿದ್ದರು. ನಿವೃತ ಶಿಕ್ಷಕಿ ಲಕ್ಷ್ಮಿ ಬಿ.ಎಸ್, ಮಂಡೆಕೋಲು ಶಾಲಾ ಶಿಕ್ಷಕಿ ಭವಾನಿ ಮುಡೂರು ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಪ್ರಾಸ್ತಾವಿಕ ಮಾತನ್ನಾಡಿದರು.
ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರಿಗಾಗಿ ಸಂವಾದ ಕಾರ್ಯಕ್ರಮ, ವಿವಿಧ ಫನ್ನಿ ಗೇಮ್ಸ್ ಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಇದೇ‌ ಸಂದರ್ಭದಲ್ಲಿ ವಿಮಲಾರುಣರವರು ಅವರ ಕೃತಿಗಳಾದ ಗಿರಿಕರ್ಣಿಕೆ(ಕಥಾ ಸಂಕಲನ), ಮಿಂಚುಹುಳ ಹಾಗೂ ಸೂಂತ್ರಿ ಎಂಬ ಕವನ ಸಂಕಲನಗಳ ಒಂದಷ್ಟು ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಸ್ವಾತಿ ಉಗ್ರಾಣಿಮನೆಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭವಾನಿ ಕುಂಡಪ್ಪಾರೆ ಸ್ವಾಗತಿಸಿ ಸಾವಿತ್ರಿ ಕಣೆಮರಡ್ಕ ವಂದನಾರ್ಪಣೆಗೈದರು. ಗೀತಾ ಗಣೇಶ್ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು.



































































































Leave a Comment

Your email address will not be published. Required fields are marked *

error: Content is protected !!
Scroll to Top