ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ರಾಜೇಶ್ ನಾಯಕ್ ಎಂಬ ಸಾಮಾನ್ಯ ಯುವಕನ ಮದುವೆ ಆಹ್ವಾನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಸ್ಪಂದಿಸಿದ್ದಾರೆ.
ಏಪ್ರಿಲ್ 13ರಂದು ಸವಿತಾ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜೇಶ್, ಪ್ರಧಾನಿ ಕಚೇರಿಗೆ ಆಮಂತ್ರಣ ಪತ್ರ ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ಅವರು ನವಜೋಡಿಗೆ ಶುಭಾಶಯ ಪತ್ರ ಕಳುಹಿಸಿ, “ಪರಸ್ಪರರ ಗುಣಗಳನ್ನು ಗೌರವಿಸುತ್ತಾ ಆದರ್ಶ ದಂಪತಿಗಳಾಗಿ ಬಾಳಿ” ಎಂದು ಹಾರೈಸಿದ್ದಾರೆ. ದೇಶದ ಅತ್ಯುನ್ನತಸ್ಥಾನದಲ್ಲಿದ್ದರೂ ಸಾಮಾನ್ಯ ಪ್ರಜೆಯ ಆಹ್ವಾನಕ್ಕೆ ಸ್ಪಂದಿಸಿದ ಪ್ರಧಾನಿಯ ಗುಣಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಧಾನಿ ಮೋದಿಯಿಂದ ಸಾಮಾನ್ಯ ದಂಪತಿಗೆ ಬಂತು ಉಡುಗೊರೆ














































