ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತ ವಯಸ್ಕರ ಪ್ರಯಾಣ

ಬೆಂಗಳೂರು ನಗರದ ಪಾದರಾಯನಪುರ ಮುಖ್ಯರಸ್ತೆಯಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತರು ಸವಾರಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.





















































































ಏ.26 ರಂದು ಬೆಳಿಗ್ಗೆ 10:45 ಕ್ಕೆ ಗೌರಿಪಾಳ್ಯ ಬಳಿ ಈ ಘಟನೆ ನಡೆದಿದೆ. ಅಪ್ರಾಪ್ತರು ಸ್ಕೂಟರ್‌ನಲ್ಲಿ ಸವಾರಿ ಮಾಡುವುದನ್ನು ಬೈಕ್‌ ಸವಾರರೊಬ್ಬರು ಫೋಟೋ ಕ್ಲಿಕ್ಕಿಸಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ಕೂಟರ್ ನೀಡಿ ನಿರ್ಲಕ್ಷ್ಯ ಮೆರೆದ ಪೋಷಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top