ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ

ಪಂಜ ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ನಡೆಯಿತು. ವಿದ್ಯಾರ್ಥಿಗಳನ್ನು ಮತ್ತು ಅತಿಥಿಗಳನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಶಾಲಾ ಹೊಸ ಕಟ್ಟಡವನ್ನು ಅತಿಥಿಗಳು ಉದ್ಘಾಟನೆ ಮಾಡಿದರು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ದೀಪೋಜ್ವಲನೆಯ ಮೂಲಕ ಶಾಲಾ ಪ್ರಾರಂಭೋತ್ಸವಕೆ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಕಬ್ ಬುಲ್ ಬುಲ್ ಸಮವಸ್ತ್ರ ಮತ್ತು ಯೋಗ ಮ್ಯಾಟ್ ವಿತರಿಸುವುದರ ಮೂಲಕ ಹಾಗೂ ವಿದ್ಯಾರ್ಥಿಗಳನ್ನು ಕರಕುಶಲ ಕಲೆಯಲ್ಲಿ ಪರಿಣಿತರನ್ನಾಗಿಸಲು ಹೊಲಿಗೆ ತರಬೇತಿಗೆ ಬೇಕಾದ ಹೊಲಿಗೆ ಯಂತ್ರಕ್ಕೆ ಚಾಲನೆಯನ್ನು ನೀಡಲಾಯಿತು.
ನಂತರ ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆಯ ಮೂಲಕ ಕರೆದುಕೊಂಡು ಬಂದು ಆರತಿ ಬೆಳಗಿ ಹೂವನ್ನು ನೀಡಿ ನಮ್ಮ ಶಾಲೆಗೆ ಸ್ವಾಗತಿಸಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಪಂಜದ ಡಾ.ದೇವಿಪ್ರಸಾದ್ ಕಾನತ್ತೂರು,ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅನುರಾಜ್ ಕಕ್ಯಾನ, ಪಂಜ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಜಳಕದ ಹೊಳೆ, ಪಂಚಾಯತ್‌ ವಾರ್ಡ್ ಸದಸ್ಯರಾದ ಪ್ರಮೀಳಾ ಸಂಪ, ನಿವೃತ್ತ ಶಿಕ್ಷಕರಾದ ಕುಸುಮಾಧರ ಕೆಮ್ಮೂರು, ನಿವೃತ್ತ ಶಿಕ್ಷಕಿಯವರಾದ ಸೀತಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಧುಚಂದ್ರ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕವಿತಾ ಪುತ್ಯ, ಪ್ರಭಾರ ಮುಖ್ಯ ಶಿಕ್ಷಕಿಯಾದ ಸರೋಜಿನಿ.ಕೆ, ಸಹ ಶಿಕ್ಷಕಿಯರಾದ ವಿದ್ಯಾಶ್ರೀ ಗೌಡ, ವನಜಾಕ್ಷಿ ಬಿ .ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಕಾರ್ಯಕ್ರಮದ ಉದ್ಘಾಟಕರಾದ ಡಾ. ದೇವಿ ಪ್ರಸಾದ್ ಕಾನತ್ತೂರು ಅವರು ಮಾತನಾಡಿ ಸರಕಾರಿ ಶಾಲೆಯಲ್ಲಿ ಎಲ್ಲಾ ಸವಲತ್ತುಗಳು ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದು ಅವುಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ನಿಮ್ಮ ಮುಂದಿನ ಭವಿಷ್ಯವನ್ನು ಉಜ್ವಲವಾಗಿಸಿ ಎಂದು ಶುಭ ಹಾರೈಸಿದರು. ನಂತರ ಮಾತನಾಡಿದ ಸೀತಾ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕುಸುಮಾಧರ ಕೆಮ್ಮೂರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಪ್ರೋತ್ಸಾಹಿಸಲು ಸರ್ಕಾರವು ಒದಗಿಸಿರುವ ಉಚಿತ ಪಠ್ಯಪುಸ್ತಕವನ್ನು ಇಂದಿನ ಸಭೆಯಲ್ಲಿ ಸಾಂಕೇತಿಕವಾಗಿ ವೇದಿಕೆಯಲ್ಲಿರುವ ಗಣ್ಯರು ವಿದ್ಯಾರ್ಥಿಗಳಿಗೆ ವಿತರಿಸಿದರು. ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಶಾಲಾ ಹಿರಿಯವಿದ್ಯಾರ್ಥಿಗಳಾದ ಪ್ರಸಾದ್ ನಾಗತೀರ್ಥ, ಸತೀಶ್
ನಾಗತೀರ್ಥ, ಯತೀಶ್ ನಾಗತೀರ್ಥ, ಕೃತಿಕ್ ಬೇರ್ಯ, ತಿರುಮಲೇಶ್ವರ ಮುಚ್ಚಿಲ, ಮಹೇಶ್ ಕಕ್ಯಾನ ಇವರು ಬರೆಯುವ ಪುಸ್ತಕಗಳನ್ನು ಉಚಿತವಾಗಿ ಮುಖ್ಯ ಗುರುಗಳಿಗೆ ಹಸ್ತಾಂತರಿಸಿದರು. ಶಾಲೆಯ ಅಭಿವೃದ್ಧಿಗಾಗಿ ದಾನಿಗಳು ನೀಡಿದ ಧನ ಸಹಾಯದ ವಿವರವನ್ನು ಶಾಲಾ ಮುಖ್ಯ ಗುರುಗಳಾದ ಸರೋಜಿನಿ,ಕೆ ಇವರು ನೀಡಿದರು. ನಂತರ ನಮ್ಮ ಶಾಲಾ ಶಿಕ್ಷಕಿಯರು ಸೇತುಬಂಧ ಶಿಕ್ಷಣ, ಶಾಲಾ ಸೌಲಭ್ಯಗಳು, ದಾಖಲಾತಿಯ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಧುಚಂದ್ರ ಆಚಾರ್ಯ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಶಾಲಾ ಸಹ ಶಿಕ್ಷಕಿಯಾದ ವಿದ್ಯಾಶ್ರೀ ಗೌಡ ಹಾಗು ಮಂಜುಳ ವೈ. ಕಾರ್ಯಕ್ರಮ ನಿರೂಪಿಸಿದರು. ವನಜಾಕ್ಷಿ ಬಿ .ಎಮ್ ವಂದಿಸಿದರು.









































































































Leave a Comment

Your email address will not be published. Required fields are marked *

error: Content is protected !!
Scroll to Top