ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ಹೋರ್ಮುಜ್ ಜಲಸಂಧಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಪೂರೈಕೆಗೆ ಕೇಂದ್ರ ಸರಕಾರ ವಿಧಿಸಲಾಗಿದ್ದ ನಿರ್ಬಂಧವನ್ನು ಹಿಂಪಡೆದಿದೆ.
ಕೆಲವು ತಿಂಗಳುಗಳಿಂದ ಸಿಲಿಂಡರ್ ಕೊರತೆಯ ಆತಂಕದಲ್ಲಿದ್ದ ಹೋಟೆಲ್, ರೆಸ್ಟೋರೆಂಟ್, ಧಾಬಾ, ಕ್ಯಾಂಟೀನ್ ಹಾಗೂ ಸಣ್ಣ ಉದ್ಯಮಗಳಿಗೆ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿದೆ. ಬಿಕ್ಕಟ್ಟಿನ ಸಮಯದಲ್ಲಿ ಗೃಹ ಬಳಕೆದಾರರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ವಾಣಿಜ್ಯ LPG ವಿತರಣೆಗೆ ಮಿತಿ ಹೇರಿತ್ತು. ಆದರೆ ಅಂತರರಾಷ್ಟ್ರೀಯ ಪರಿಸ್ಥಿತಿ ಸುಧಾರಿಸಿರುವುದು ಮತ್ತು ಪೂರೈಕೆ ಸರಪಳಿ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಇದರಿಂದ ವಾಣಿಜ್ಯ ಬಳಕೆದಾರರಿಗೆ ಮತ್ತೆ ಅಗತ್ಯ ಪ್ರಮಾಣದಲ್ಲಿ LPG ಸಿಲಿಂಡರ್‌ಗಳು ಲಭ್ಯವಾಗಲಿದ್ದು, ಬೆಲೆ ಏರಿಕೆ ಹಾಗೂ ಪೂರೈಕೆ ಕೊರತೆಯ ಆತಂಕವೂ ಕಡಿಮೆಯಾಗುವ ನಿರೀಕ್ಷೆಯಿದೆ. ವ್ಯಾಪಾರ ವಲಯ ಈ ನಿರ್ಧಾರವನ್ನು ಸ್ವಾಗತಿಸಿದೆ.
ಎಲ್.ಪಿ.ಜಿ ಪೂರೈಕೆಗೆ ಕೇಂದ್ರ ಸರಕಾರ ವಿಧಿಸಿದ್ದ ನಿರ್ಬಂಧ ತೆರವು






























































