ಗುತ್ತಿಗಾರು ಪ್ರೌಢಶಾಲೆಯಲ್ಲಿ ಕ್ರಾಫ್ಟ್ ವರ್ಕ್ ತರಬೇತಿ ಕಾರ್ಯಕ್ರಮವನ್ನು ಪ್ರದೀಪ್ ಕ್ರಾಫ್ಟ್ ವರ್ಕ್ ಸಂಸ್ಥೆಯ ಮುಖ್ಯಸ್ಥರಾದ ಪ್ರದೀಪ್ ಕರಿಕೆ ಜು.1ರಂದು ನಡೆಸಿಕೊಟ್ಟರು. ತೆಂಗಿನ ಗೆರಟೆಯಲ್ಲಿ ವಿವಿಧ ಗೃಹ ಉಪಯೋಗಿ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿತೆ ಮೂಲಕ ತೊರಿಸಲಾಯಿತು. ಸ್ವದೇಶಿ ನಿರ್ಮಿತ ವಸ್ತುವಿನ ಬಳಕೆಯಿಂದ ಪರಿಸರ ಸಂರಕ್ಷಣೆಯ ಜೊತೆಗೆ ದೇಹದ ಆರೋಗ್ಯಕ್ಕೆ ಮತ್ತು ದೇಶದ ಆರ್ಥಿಕತೆಗೆ ಅದ್ಭುತ ಶಕ್ತಿಯನ್ನು ನೀಡಬಹುದು ಎಂಬುದಾಗಿ ಅವರು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಪ್ರದೀಪ್ ಕರಿಕೆ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮತಿ ಪೂರ್ಣಿಮಾ ಮೇಡಂ ನೆನಪಿನ ಕಾಣಿಕೆ ನೀಡಿದರು. ವೇದಿಕೆಯಲ್ಲಿ ಪ್ರಮುಖರಾದ ಗುತ್ತಿಗಾರಿನ ಕಂದ್ರಪ್ಪಾಡಿಯ ಸಾಮಾಜಿಕ ಕಾರ್ಯಕರ್ತ ವಿಜೇಶ್ ಹಿರಿಯಡ್ಕ, ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಅಂಬೆಕಲ್ಲು, ಯುವ ವಕೀಲರಾದ ಭಾನುಪ್ರಕಾಶ್ ಪೆರುಮುಂಡ, ಹಳೆ ವಿದ್ಯಾರ್ಥಿ ವಿನೀತ್ ಮುತ್ಲಾಜೆ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಬಾಲಸುಬ್ರಹ್ಮಣ್ಯ ಭಟ್ , ಶಿಕ್ಷಕ ವೃಂದ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗುತ್ತಿಗಾರು ಪ್ರೌಢಶಾಲೆಯಲ್ಲಿ ಕ್ರಾಫ್ಟ್ ವರ್ಕ್ ತರಬೇತಿ ಕಾರ್ಯಕ್ರಮ






























































