ಜುಲೈ 2; ಸುಳ್ಯ ರೋಟರಿ ಸಿಟಿಯ ಪದ ಪ್ರದಾನ ಸಮಾರಂಭ

2026-27ನೇ ಸಾಲಿನ ರೋಟರಿ ಕ್ಲಬ್‌‌ ಸುಳ್ಯ ಸಿಟಿಯ ಪದಗ್ರಹಣ ಸಮಾರಂಭವು ಜುಲೈ.07ರಂದು ಸುಳ್ಯದ ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ನೂತನ ಅಧ್ಯಕ್ಷ ರಾಗೇಶ್ ರಾಘವ್‌ ತಿಳಿಸಿದರು.
ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಜು.02ರಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
2026-2026-27ನೇ ಸಾಲಿನ ಅಧ್ಯಕ್ಷರಾಗಿ ಪಿ.ಎಚ್.ಎಫ್ ರಾಗೇಶ್ ರಾಘವ್‌, ಕಾರ್ಯದರ್ಶಿಯಾಗಿ ಪುರಂದರ ರೈ.ಪಿ, ಖಜಾಂಜಿಯಾಗಿ ನವೀನ್ ಚಂದ್ರ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಪಿ.ಎಚ್.ಎಫ್ ಪ್ರೀತಮ್ ಡಿ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಮಧು ಕಿರಣ್ ಕೆ.ಎನ್, ಸರ್ಜೆಂಟ್-ಅಟ್-ಆರ್ಮ್ಸ್ ಆಗಿ ಪಿ.ಎಚ್‌.ಎಫ್ ಮುರಳೀಧರ್ ರೈ, ಎಕ್ಸಿಕ್ಯೂಟಿವ್ ಚೇರ್ಮನ್ ಆಗಿ ಪಿಎಚ್‌ಎಫ್ ಪ್ರಮೋದ್ ಕುಮಾರ್, ಮೆಂಬರ್‌ಶಿಪ್ ಚೇರ್ಮನ್ ಆಗಿ ಅಭಿಷೇಕ್ ಕೇಕಡ್ಕ ವೊಕೇಶನಲ್ ಸರ್ವೀಸ್ ಚೇರ್ಮನ್ ಆಗಿ ಪಿ.ಎಚ್.ಎಫ್ ಶಿವಪ್ರಸಾದ್ ಕೆ.ವಿ, ಸರ್ವೀಸ್ ಪ್ರಾಜೆಕ್ಟ್ ಚೇರ್ಮನ್ ಆಗಿ ಹೇಮಂತ್ ಕಾಮತ್, ನ್ಯೂ ಜನರೇಷನ್ ಚೇರ್ಮನ್ ಆಗಿ ಮುಕುಂದ್ ನಾರ್ಕೋಡು, ಪಬ್ಲಿಕ್ ಇಮೇಜ್ ಚೇರ್ಮನ್ ಆಗಿ ರವಿಕಿರಣ್ ಪಿ.ಎನ್ ಹಾಗೂ ಪಲ್ಸ್ ಪೋಲಿಯೊ ಚೇರ್ಮನ್ ಆಗಿ ಡಾ. ಅಮಿತ್ ಕುಮಾರ್ ಟಿ. ಆಯ್ಕೆಯಾಗಿದ್ದಾರೆ” ಎಂದು ಮಾಹಿತಿ ನೀಡಿದರು.
ಬಳಿಕ ವಾರ್ಷಿಕ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಹೇಮಂತ್ ಕಾಮತ್, ಮಾಜಿ ಖಜಾಂಜಿ ಪ್ರೀತಮ್ ಡಿ.ಕೆ, ಕಾರ್ಯದರ್ಶಿ ಪುರಂದರ ರೈ, ಯೋಜನಲ್ ಲೆಫ್ಟಿನೆಂಟ್ ಗಿರೀಶ್ ನಾರ್ಕೋಡು ಹಾಗೂ ಎಕ್ಸಿಕ್ಯೂಟಿವ್ ಚೇರ್ಮನ್ ಪಿಎಚ್‌ಎಫ್ ಪ್ರಮೋದ್ ಹಾಗೂ ಇತರರು ಉಪಸ್ಥಿತರಿದ್ದರು.





















































































































Leave a Comment

Your email address will not be published. Required fields are marked *

error: Content is protected !!
Scroll to Top